ನಮ್ ಇಸ್ಕೂಲ್ ಡ್ರಾಮ ( ಬೊಂಬೆ ಆಡ್ಸೋನು ಮೇಲೆ ಕುಂತವ್ನೆ ಹಾಡಿನ ರಾಗದ ಧಾಟಿ ) ಸಂಬಳ ಕೊಡೋನು ಮೇಲೆ ಕುಂತವ್ನೆ ನಮಗೆ ನಿಮಗೆ ಯಾಕೆ ಟೆನ್ಷನ್ II ೧ II ಸಿಸ್ಟಮ್ ಪೊಲಿಟಿಕ್ಸ ಕೈಲಿ ನಾವೇನು ಮಾಡೋಣ ಎಲ್ಲಾರು ಕಿವಿ ಮುಚ್ಕೊಂಡು ಹೇಳಿದ ಕೇಳಾಣ II ೧ II NCF ತಳ ಯಾವುದು RTE ಬುಡ ಯಾವುದು BEO visit ಯಾವುದು BRC Notice ಯಾವುದು DDPI ಖಾರಾಬಾತ್ BEO ಕೇಸರೀ ಬಾತ್ HM ಲೈಪ್ ಚೌಚೌಬಾತ್ ಇನ್ಯಾಕೆ ಸ್ಕೂಲ್ ಮಾತು ಬಿಸಿಯೂಟ ತಿಂದಮೇಲೆ ನಿದ್ದೆ ಬರದೆ ಇರ್ತದಾ ? ಬಿಸಿ ಬಿಸಿ ಅನ್ನ ಸಾರು ತಿನ್ನದೇ ಇರಾಕ್ ಆಯಿತದಾ .. ? CRP ಬರೋದಿಲ್ಲಾ ನಾವೇನು ಮಾಡಾಣ ಅವರ್ ಕೇಳಿದ್ ಡೇಟಾ ಕೊಡದೆ ಡ್ರಾಮಾ ಆಡ್ಸೋಣಾ ... II ೧ II ಒಂದೊಂದು ಸ್ಕೂಲಲ್ಲೂ ಬೇರ್ ಬೇರೆ ಟೀಚರ್ ಅಲ್ಲೊಬ್ರು ಸೂಪರ್ ಇಲ್ಲೊಬ್ರು ಪಾಪರ್ ಓದಿಸೋ ನಮ್ ಮೇಷ್ಟ್ರು , ಇಲಾಖೆ ಆಪೀಸರ್ರು ಸುಸ್ತಾಗಿ ಮಲಗವರೆ ಯಾರಪ್ಪ ಎಬ...
ಪೋಸ್ಟ್‌ಗಳು
2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಅಮ್ಮನ ಕವನ ಏನಾಗುವನೋ ಇವನೇನಾಗುವನೋ ಸಿಕ್ಕ ಸಿಕ್ಕಿದ್ದನ್ಲಲ್ಲಾ ಭಕ್ಷಿಸುವನೋ ರಕ್ಷಣಾ ಪಡೆಗೇನಾದರು ಸೇರುವನೋ ಸಣ್ಣ ವಿಷಯಕ್ಕೆ ಕೋಪಿಸಿಕೊಳ್ಳುವನು BMTC ಕಂಡಕ್ಟರನಾಗುವನೋ..... ಏನಾಗುವನೋ ಇವನೇನಾಗುವನೋ ಸಿಕ್ಕ ಸಿಕ್ಕವರಿಗೆಲ್ಲಾ ಹೊಡೆಯುವನೋ ಕೋಪಿಷ್ಟ ಪೋಲಿಸ್ ಪೇದೆಯಾಗುವನೋ ನಿಂತಲ್ಲಿ ನಿಲ್ಲದೆ ಓಡುವನೋ ಇವನೇನಾದರೂ ಅಂಚೆ ಮಾಸ್ತರನಾಗುವನೋ..... ಏನಾಗುವನೋ ಇವನೇನಾಗುವನೋ ಕಂಡ ಕಂಡವರನ್ನೆಲ್ಲಾ ಪೀಡಿಸುವನೋ ವಿಮಾ ಪಾಲಿಸಿ ಏಜೆಂಟನಾಗುವನೋ ಕಂಡ ಕಂಡವರ ಹತ್ತಿರ ಕೈ ಚಾಚುವನೋ ಸರಕಾರಿ ಕಛೇರಿ ನೌಕರನಾಗುವನೋ..... ಏನಾಗುವನೋ ಇವನೇನಾಗುವನೋ ಯಾವಾಗಲೂ ಗುಂಪುಗಾರಿಕೆ ಮಾಡುವನೋ ರಾಜಕೀಯ ಮರಿ ಪುಢಾರಿಯಾಗುವನೋ ಒಬ್ಬನೇ ಪಟ ಪಟ ಮಾತನಾಡುವನೋ ಕಾಲೇಜು ಉಪನ್ಯಾಸಕನಾಗುವನೋ..... ಏನಾಗುವನೋ ಇವನೇನಾಗುವನೋ ತಾಯಿಯಲ್ಲಿ ಹೆಚ್ಚು ಪ್ರೀತಿ ಇಟ್ಟಿರುವನು ಅಪ್ಪಟ ಕನ್ನಡದ ಕಂದ ಇವನಾಗುವನು......... ...