ಪೋಸ್ಟ್‌ಗಳು

ಜುಲೈ, 2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
ಅಮ್ಮನ ಕವನ                                                                ಏನಾಗುವನೋ ಇವನೇನಾಗುವನೋ ಸಿಕ್ಕ ಸಿಕ್ಕಿದ್ದನ್ಲಲ್ಲಾ ಭಕ್ಷಿಸುವನೋ ರಕ್ಷಣಾ ಪಡೆಗೇನಾದರು ಸೇರುವನೋ ಸಣ್ಣ ವಿಷಯಕ್ಕೆ ಕೋಪಿಸಿಕೊಳ್ಳುವನು BMTC ಕಂಡಕ್ಟರನಾಗುವನೋ..... ಏನಾಗುವನೋ ಇವನೇನಾಗುವನೋ ಸಿಕ್ಕ ಸಿಕ್ಕವರಿಗೆಲ್ಲಾ ಹೊಡೆಯುವನೋ ಕೋಪಿಷ್ಟ ಪೋಲಿಸ್ ಪೇದೆಯಾಗುವನೋ ನಿಂತಲ್ಲಿ ನಿಲ್ಲದೆ ಓಡುವನೋ ಇವನೇನಾದರೂ ಅಂಚೆ ಮಾಸ್ತರನಾಗುವನೋ..... ಏನಾಗುವನೋ ಇವನೇನಾಗುವನೋ ಕಂಡ ಕಂಡವರನ್ನೆಲ್ಲಾ ಪೀಡಿಸುವನೋ ವಿಮಾ ಪಾಲಿಸಿ ಏಜೆಂಟನಾಗುವನೋ ಕಂಡ ಕಂಡವರ ಹತ್ತಿರ ಕೈ ಚಾಚುವನೋ ಸರಕಾರಿ ಕಛೇರಿ ನೌಕರನಾಗುವನೋ..... ಏನಾಗುವನೋ ಇವನೇನಾಗುವನೋ ಯಾವಾಗಲೂ ಗುಂಪುಗಾರಿಕೆ ಮಾಡುವನೋ ರಾಜಕೀಯ ಮರಿ ಪುಢಾರಿಯಾಗುವನೋ ಒಬ್ಬನೇ  ಪಟ ಪಟ ಮಾತನಾಡುವನೋ ಕಾಲೇಜು ಉಪನ್ಯಾಸಕನಾಗುವನೋ..... ಏನಾಗುವನೋ ಇವನೇನಾಗುವನೋ ತಾಯಿಯಲ್ಲಿ ಹೆಚ್ಚು ಪ್ರೀತಿ  ಇಟ್ಟಿರುವನು ಅಪ್ಪಟ ಕನ್ನಡದ ಕಂದ  ಇವನಾಗುವನು.........                                 ...
ಮನದಾಳದ ಮಾತುಗಳನ್ನು , ಮನಸ್ಸಿನ ತುಡಿತಗಳನ್ನು, ಜೀವನದ ಕಾತರಗಳನ್ನು ನಿಮ್ಮೆಲ್ಲರೊಡನೆ ಹಂಚಿಕೊಳ್ಳುವ ಬಯಕೆಯಿಂದ ,  ಈ ಬ್ಲಾಗ್  ಇಂದು ಸೃಷ್ಟಿಯಾಯಿತು......... ನಿಮ್ಮ ಮನ ತಣಿಸುವ ಲೇಖನಗಳನ್ನು ಅತೀ ಶೀಘ್ರದಲ್ಲಿಯೇ ಪ್ರಕಟಿಸುತ್ತೇನೆ.....