ಜೀವನ .........




ಕಾಣುತ್ತಲೇ ಇದ್ದೇವೆ  ಜೀವನದ ಕನಸು
ಆದರೆ ಮಾಡಿಕೊಳ್ಳಲಾಗು ತ್ತಿಲ್ಲ ನನಸಾಗಿಸಿಕೊಳ್ಳುವ ಮನಸ್ಸು
ಎಲ್ಲಿದ್ದೆವು ನಾವು ಎಲ್ಲಿರಬೇಕಿತ್ತು ನಾವು
ಎಲ್ಲಿರು ವೆವು ಈದಿನ
ಏಳು ಬೀಳಿನ ನಡುವೆ ಗೊತ್ತು ಗುರಿಯಿಲ್ಲದೆಡೆಗೆ
ಸಾಗುತ್ತಿದೆ ಈ ಜೀವನ
ನಾವಾರು ಬಯಸಿರಲಿಲ್ಲಾ ಈ ಜೀವನ
ಬಯಸದೇ ಬರು ವ ನೋವಿಗೆ
ಜೀವನದಲ್ಲಿ ನೂ ರಾರು ಕಾರಣ
ರೇಷ್ಮೆ ಹುಳು ತನ್ನ ಸಾವಿನ ಬಲೆ
ತಾನೇ ಹೆಣೆವಂತೆ
ನಮ್ಮ ನಮ್ಮ ಜೀವನದ ನೋವಿಗೆ ನಾನೇ ಹೊಣೆಯಂತೆ…
ನಮ್ಮೊಳಗೆ ನಾವಾಗಬೇಕು ಪ್ರವೇಶ
ಹೊರಬರಬೇಕಿದೆ ನಮ್ಮೊಳಗಿನ ವಿಶೇಷ
ತೊಟ್ಟು ಕೊಂಡು ಹೊರಡಬೇಕಿದೆ ಗೆದ್ದವರ ವೇಷ
ಉಳಿಸಿಕೊಳ್ಳೋದು ಬೇಡ ಸೋಲಿನ ಅವಶೇಷ
                                                     :- ಕನ್ನಡವೆಂಕಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸಂಕ್ರಾಂತಿ ಶುಭಾಶಯಗಳು

ವಿದ್ಯಾಗಮ‌ ಕಾರ್ಯಕ್ರಮ ಸ್ಥಗಿತದ ಹಿಂದಿನ ಕಾರಣಗಳು

ನಮ್ಮ ಹಿರಿಯರ ಹಬ್ಬಗಳು ಮತ್ತು ನಮ್ಮ ಇಂದಿನ ಮನೋಭಾವಗಳು