ಮೊದಲನೇ ವಾರ್ಷಿಕೋತ್ಸವದ ದಿನ ನನ್ನವಳಿಗಾಗಿ ಬರೆದ ಸಾಲುಗಳು...


ಇಳಿ ಸಂಜೆಯ ತಿಳಿ ಬೆಳಕಲಿ
ನಿನ್ನ  ಕಣ್ಣ ಕಾಂತಿಯೇ ನನಗೆ ಸ್ಪೂರ್ತಿಯು
ಪ್ರಾಸ ಮರೆತ ಪದ ಪುಂಜದಲ್ಲಿ
ನಿನ್ನ ತುಟಿ ಅಂಚಿನ ಮೌನವೇ ಕವಿತೆಯು

ಬದುಕಿಗಷ್ಟು ಬಣ್ಣ ಕನಸಿಗಿನ್ನೂ ಕಣ್ಣ
ಹುಡುಕುತಲಿ ಅಲೆಯುತಿದ್ದಾಗ ಬಂದವಳು ನೀನು
ಜಗವೆಲ್ಲ  ಬರಡಾಗಿ ನನ್ನೊಳಗೆ
ನೀನಿರೆ ಅನುದಿನ ಅಷ್ಟೇ ಸಾಕು ಎನ್ನುವೆನು ನಾನು

ನಿನಗೆಂದೆ ಬರೆದ ಈ ಸಾಲನು ನಿನ್ನ
ಕಿವಿ ಅಂಚೆಯಲಿ ಹಾಕುತಲಿರುವೆ
ಲೋಕವೆಲ್ಲ ಕಿವುಡಾಗಿ ನಿನಗೊಬ್ಬಳಿಗೆ
ಕೇಳಬೇಕಿದೆ ಮನದ ಈ ಮಾತು..

ಜೊತೆಯಿರಲಿ ಎಂದೆಂದೂ ನಿನ್ನ ಸಾರಥ್ಯ
ಮರೆಸುವುದೆನಗೆ ಎಲ್ಲ ನೋವ ನಿನ್ನ ಸಾಂಗತ್ಯ
ಕ್ಷಣದಲ್ಲೇ ಕಳೆದೊಯ್ತು ಒಂದು ವರುಷ
ನಿನ್ನ ಮಡಿಲು ನೀಡಿದೆ ಮೈಮರೆವ ಹರುಷ
ಈ ಜೀವ ಜೀವನಕೆ ಸದಾ ಹಸಿರಾಗಿರು ಸದಾ ನನ್ನ ಉಸಿರಾಗಿರು..

 ಮೊದಲನೇ ವರ್ಷದ ಶುಭಾಶಯಗಳು ನನ್ನೊಲವೆ..

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸಂಕ್ರಾಂತಿ ಶುಭಾಶಯಗಳು

ವಿದ್ಯಾಗಮ‌ ಕಾರ್ಯಕ್ರಮ ಸ್ಥಗಿತದ ಹಿಂದಿನ ಕಾರಣಗಳು

ನಮ್ಮ ಹಿರಿಯರ ಹಬ್ಬಗಳು ಮತ್ತು ನಮ್ಮ ಇಂದಿನ ಮನೋಭಾವಗಳು