ವಿದ್ಯಾಗಮ ಕಾರ್ಯಕ್ರಮ ನಿಲ್ಲಲು ಕಾರಣಗಳು ಹಾಗು ಅದರ ಹಿಂದಿರುವ ಕೈಗಳು ಯಾವುವು ಗೊತ್ತಾ... ಮುಂಬರುವ ಎಂ.ಎಲ್.ಸಿ ಎಲೆಕ್ಷನ್ ಲಿ ಕ್ಯಾಂಪೇನ್ ಮಾಡೋಕೆ ಶಿಕ್ಷಕರು ಬೇಕಿತ್ತು, ಒಳ್ಳೆ ಕಾರ್ಯಕ್ರಮದಿಂದ ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಾಗ್ತ ಇದ್ದಿದ್ದು ನೋಡಿ ಖಾಸಗಿಯವರಿಗೆ ದಿಗಿಲಾಗಿತ್ತು, ಪ್ರಾಮಾಣಿಕವಾಗಿ ಬಡ ಮಕ್ಕಳೊಡನೆ ಬೆರೆತು ಕೆಲಸ ಮಾಡ್ತಿದ್ದ ಶಿಕ್ಷಕರನ್ನು ನೋಡಿ ಕೆಲವು ಸೋಮಾರಿ/ಅಪ್ರಮಾಣಿಕ ಶಿಕ್ಷಕರಿಗೆ ಇದನ್ನು ಹೇಗಾದರೂ ಮಾಡಿ ನಿಲ್ಲಿಸಬೇಕು ಎಂಬ ದುರಾಸೆ ಮೂಡಿತ್ತು ಇವರೆಲ್ಲಾರಿಗೂ ಕಂಡಿದ್ದು ಒಂದೇ ಕಾರಣ ಅದು "ಕರೋನಾ". ಇವರೆಲ್ಲಾ ಸೇರಿ ಲಜ್ಜೆಗೆಟ್ಟ ಮಾಧ್ಯಮಗಳಿಗೆ ಫಂಡ್ ಮಾಡಿದ್ವು, ಸಂಜನಾ, ಕಂಗನಾ, ರಾಗಿಣಿ ಹಿಂದೆ ಬಿದ್ದಿದ್ದ ಇವರಿಗೆ ಆಗೆಲ್ಲಾ ಈ ವಿದ್ಯಾಗಮ ಕಾಣಲೇ ಇರಲಿಲ್ಲ. ವಿದ್ಯಾಗಮ ಕಾರ್ಯಕ್ರಮದ ಆಳ ಅಗಲದ ಅರಿವೇ ಇಲ್ಲದ ಈ ಮಾನಗೆಟ್ಟ ಮಾದ್ಯಮಗಳು ಅದನ್ನೇ ದೊಡ್ಡದಾಗಿ ತೋರಿಸಿ ಇಡೀ ಕಾರ್ಯಕ್ರಮವನ್ನೇ ನಿಲ್ಲಿಸಿದರು. ಬಡ ಮಕ್ಕಳಿಗೆ ಮನೆಬಾಗಿಲಲ್ಲಿ ಸಿಗುತ್ತಿದ್ದ ಶಿಕ್ಷಣಕ್ಕೆ ಕಲ್ಲು ಹಾಕಿ ಅದು ನಮ್ಮಿಂದಲೇ ಅಂತ ನಾಚಿಕೆ ಬಿಟ್ಟ ಅಷ್ಟೂ ಮಾದ್ಯಮಗಳು ಪ್ರಚಾರ ಪಡೆದುಕೊಂಡವು. ವಿದ್ಯಾಗಮ ಕಾರ್ಯಕ್ರಮ ನಿಲ್ಲೋದರಿಂದ ಶಿಕ್ಷಕರಿಗಾಗಲಿ, ರಾಜಕಾರಣಿಗಳಿಗಾಗಲಿ, ಮಾನಗೆಟ್ಟ ಮಾಧ್ಯಮಗಳ ಪ್ರತಿನಿಧಿಗಳಿಗಾಗಲಿ ಯಾವುದೇ ನಷ್ಟವಿಲ್ಲ. ಯಾಕೆಂದ್ರೆ ಅವರ ಮಕ್ಳಳೆಲ್ಲಾ ಖಾಸಗಿ ಶಾಲೆಗಳಲ್ಲಿ...
ನಮ್ಮ ಹಿರಿಯರ ಹಬ್ಬಗಳು ಮತ್ತು ನಮ್ಮ ಇಂದಿನ ಮನೋಭಾವಗಳು (ನೇಸರ ಉದಯೋನ್ಮುಖ ಬರಹಗಾರರ ವೇದಿಕೆ, ಬೆಂಗಳೂರು ಸ್ಪರ್ಧೆಯಲ್ಲಿ ಮೊದಲನೇ ಬಹುಮಾನ ಪಡೆದ ಲೇಖನ) ಅದೊಂದು ಕಾಲದಲ್ಲಿ , ಹಬ್ಬವೆಂದರೆ ಇಡೀ ಊರಿಗೆ ಊರೇ ಸಂಭ್ರಮದಿಂದ ಸಜ್ಜುಗೊಳ್ಳುತ್ತಿತ್ತು , ಹಬ್ಬದಿ ಹಿಂದಿನ ದಿನದಿಂದ ಹಬ್ಬ ಮುಗಿದ ಮೂರು ದಿನಗಳ ತನಕವೂ ಅದೇ ಸಂಭ್ರಮದಲ್ಲಿ ಜನರು ತಮ್ಮ ಎಲ್ಲಾ ನೋವು ಕಷ್ಟ ಕಾರ್ಪಣ್ಯಗಳನ್ನು ಮರೆತುಬಿಡುತ್ತಿದ್ದರು . ಮನೆಯ ಮೂಲೆ ಮೂಲೆಯ ಕಸ ಕೊಳೆ ತೆಗೆದು ತೋರಣ - ತಳಿರುಗಳಿಂದ ಶೃಂಗಾರಗೊಳ್ಳುತ್ತಿದ್ದವು , ಇಲ್ಲಿ ಯಾವುದೇ ತೋರಿಕೆ ಇರುತ್ತಿರಲಿಲ್ಲ ಮತ್ತು ಆಡಂ ಭ ರವೂ ಇರುತ್ತಿರಲಿಲ್ಲ . ತಮ್ಮ ಬಳಿ ಇರುವ ವಸ್ತುಗಳೇ ಸಾಕಾಗುತ್ತಿದ್ದವು . ಅದಕ್ಕಿಂತ ಹೆಚ್ಚಾಗಿ ವರ್ಷದ ಕೆಲವು ಹಬ್ಬಗಳನ್ನು ಮಾತ್ರವೇ ಈ ರೀತಿ ವಿಜೃಂಭಣೆಯಿಂದ ಮಾಡಲಾಗುತಿತ್ತು . ನಾವೆಲ್ಲಾ ಚಿಕ್ಕವರಿದ್ದಾಗ ಹಬ್ಬದ ದಿನ ನಮ್ಮಗಳ ಅಪ್ಪಂದಿರು ಪೇಟೆಗೆ ಹೋಗಿ ಮದ್ಯ್ಹಾನದ ವೇಳೆ ಹಬ್ಬದ ಸಾಮಾನು ತರುತ್ತಿದ್ರು , ನಾವೆಲ್ಲಾ ಅವರ ಬರುವಿಕೆಯನ್ನೇ ಎದುರು ನೋಡುತ್ತಾ ಏನೇನು ತರಬಹುದು , ಯಾವ ಬಣ್ಣದ ಬಟ್ಟೆ ತರಬಹುದು , ಬಲೂನು ಪೀಪಿ ತರಬಹುದಾ ಎಂಬ ಕುತೂಹಲದಿಂದ ಕಾಯುತ್ತಿದ್ದೇವು . ಆ ಕುತೂಹಲದಲ್ಲಿದ್ದ ಖುಷಿ ಸಮಾನವಾದುದು ಯಾವುದೂ ಇಲ್ಲ . ಈಗ ಏನಾಗಿದೆ , ತಿಂಗಳಿಗೆ ಎರಡು ಹಬ್ಬಗಳು ಸಂಕಷ್ಟಿ , ಏಕಾದಶಿ , ಚತುರ್ಥಿ , ಗೌರಿ ವ್ರತ , ಲಕ್ಷ್ಮೀಪೂ...
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ