ಪ್ರೀತಿಯ ಕಹಾನಿ……….


ನಿಂತಾಗ ಪಯಸ್ವಿನಿ ನದಿಯ
ತೂಗು ಸೇತುವೆಯ ಮೇಲೆ
ಮನದ ಮೂಲೆಯಲ್ಲಿ
ಶುರುವಾಯಿತು ಎಂಥದೋ ಸೆಲೆ
ಕೇಳಿಬರುತ್ತಿತ್ತು ಶಾಂತ ಪ್ರವಾಹದ
ನೀರಿನ ಜುಳು ಜುಳು
ಹರಿದಾಡಿದಂತೆ ಭಾಸವಾಯಿತು
ಎದೆಯೊಳಗೆ ಮಿಂಚು ಹುಳು
ಬೀಳುತ್ತಲಿತ್ತು ಒಂದೇ ಸಮನೆ ತುಂತುರು ಹನಿ
ಹನಿಯ ರಭಸಕ್ಕೆ ಕರಗುತ್ತಲಿತ್ತು
ಎಲೆಯ ಮೇಲಿನ ಹನಿ ಇಬ್ಬನಿ
ಹೊರಬರಲಾಗದೇ ಚಡಪಡಿಸುತಿತ್ತು
ಮನದಾಳದ ಪಿಸುಧ್ವನಿ
ಮನಸ್ಸಿನೊಳಗೆ ಬರವಣಿಗೆ ಆರಂಬಿಸಿತ್ತು ಬರೆಯಲು
ಪ್ರೀತಿಯ ಕಹಾನಿ……….
                        - ಕನ್ನಡ ವೆಂಕಿ (ವೆಂಕಟೇಶ್)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸಂಕ್ರಾಂತಿ ಶುಭಾಶಯಗಳು

ನಮ್ಮ ಹಿರಿಯರ ಹಬ್ಬಗಳು ಮತ್ತು ನಮ್ಮ ಇಂದಿನ ಮನೋಭಾವಗಳು

ವಿದ್ಯಾಗಮ‌ ಕಾರ್ಯಕ್ರಮ ಸ್ಥಗಿತದ ಹಿಂದಿನ ಕಾರಣಗಳು