ಪೋಸ್ಟ್‌ಗಳು

ನವೆಂಬರ್, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನಮ್ಮ ಹಬ್ಬಗಳು ಮತ್ತು ನಾವು

ಬಾ ಮಳೆಯೇ ಬಾ ಇನ್ನು ಬಿರುಸಾಗಿ ಬಾ ಜನರಾರು ಹೊರಗೆ ಬಾರದಂತೆ ಜಿಡಿಜಿಡಿಯಾಗಿ ಬಾ ಬೀದಿಗೆ ಬಂದು ಪಟಾಕಿ ಹೊಡೆಯದಂತೆ ....!! ಈ ದೀಪಾವಳಿ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಮೂರುದಿನಗಳ ಸತತ ಜಿಡಿ ಮಳೆ , ಬಹಳಷ್ಟು ಜನಕ್ಕೆ ಈ ಮಳೆಯಿಂದಾಗಿ ಬೇಸರ , ಸಿಡಿಮಿಡಿ ಆಗಿರಬಹುದು . ಮಳೆಯಲ್ಲಿ ತೋಯ್ದು ಬಂದರೂ ಸಹ ಈ ಮೂರುದಿನಗಳಲ್ಲಿ ಮಳೆ ಬಂದಿದ್ದಕ್ಕೆ ನನಗೆ ವೈಯುಕ್ತಿಕವಾಗಿ ಬಹಳ ಖುಷಿಯಾಯಿತು . ಈ ಮೆಟ್ರೋ ನಗರಗಳ ಜೀವನದಲ್ಲಿ ನಮ್ಮ ಹಬ್ಬಗಳ ಆಚರಣೆಯ ಶೈಲಿಯೇ ಬದಲಾಗಿ ಹೋಗಿದೆ . ನಮ್ಮ ಹಿರಿಯರು ಆ ಹಬ್ಬಗಳಿಗೆ ನೀಡುತ್ತಿದ್ದ ಮಹತ್ವ ಹಾಗು ಆ ಹಬ್ಬಗಳ ಆಚರಣೆಯ ಹಿಂದೆ ಇದ್ದ ವೈಜ್ಞಾನಿಕ ಕಾರಣಗಳನ್ನು ಮರೆತಿದ್ದೇವೆ . ಬೆಂಗಳೂರಿನಂತಹ ಮಹಾನಗರಗಳಲ್ಲಿ ಪ್ರತಿ ಹಬ್ಬದ ಸನ್ನಿವೇಶದಲ್ಲೂ ನಾವು ನೋಡುವ ಸನ್ನಿವೇಶಗಳು ಈ ಹಬ್ಬಗಳ ಬಗ್ಗೆ ಬೇಸರ & ವಾಕರಿಕೆ ಮೂಡಿಸುತ್ತವೆ . ಗಣೇಶ ಹಬ್ಬ ಮುಗಿದ ಮೇಲೆ ಯಾವ ಕೆರೆ ಕಟ್ಟೆಗಳಲ್ಲಿ ನೋಡಿದರೂ ವಿಘ್ನ ಭಗ್ನವಾಗಿ ಅನಾಥವಾಗಿ ಬಿದ್ದಿರುವ ಗಣಪ ವಿಗ್ರಹಗಳಿಗೆ ಬರವಿಲ್ಲ , ಈ ವಿಗ್ರಹಗಳಿನ ಬಣ್ಣದ ರಾಸಾಯನಿಕಗಳಿಗೆ ಬಲಿಯಾಗುವ ಅದೆಷ್ಟೋ ಜಲಚರಗಳಿಗೆ ಲೆಕ್ಕವಿಲ್ಲ . ದಸರಾ ಮುಗಿಯುತ್ತಿದ್ದಂತೆ ಬೀದಿ ಬೀದಿಗಳಲ್ಲಿ ಸಂಗ್ರಹವಾಗುವ ತ್ಯಾಜ್ಯವಿಲೇವಾರಿಯ ಕಷ್ಟ ಪಾಪ ಆ ಅಮಾಯಕ ಕಸ ಸಂಗ್ರಹಿಸುವವರಿಗೆ ಮಾತ್ರವೇ ಗೊತ್ತು , ದುರ್ವಾಸನೆ ಅಂತ ಮೂ