ಪೋಸ್ಟ್‌ಗಳು

2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
ನಮ್ ಇಸ್ಕೂಲ್ ಡ್ರಾಮ                         ( ಬೊಂಬೆ ಆಡ್ಸೋನು ಮೇಲೆ ಕುಂತವ್ನೆ  ಹಾಡಿನ ರಾಗದ ಧಾಟಿ ) ಸಂಬಳ ಕೊಡೋನು ಮೇಲೆ ಕುಂತವ್ನೆ ನಮಗೆ ನಿಮಗೆ ಯಾಕೆ ಟೆನ್ಷನ್  II ೧ II ಸಿಸ್ಟಮ್ ಪೊಲಿಟಿಕ್ಸ ಕೈಲಿ ನಾವೇನು ಮಾಡೋಣ ಎಲ್ಲಾರು ಕಿವಿ ಮುಚ್ಕೊಂಡು ಹೇಳಿದ ಕೇಳಾಣ  II ೧ II NCF ತಳ ಯಾವುದು  RTE ಬುಡ ಯಾವುದು BEO  visit ಯಾವುದು BRC Notice ಯಾವುದು             DDPI ಖಾರಾಬಾತ್   BEO ಕೇಸರೀ ಬಾತ್             HM ಲೈಪ್ ಚೌಚೌಬಾತ್  ಇನ್ಯಾಕೆ ಸ್ಕೂಲ್ ಮಾತು ಬಿಸಿಯೂಟ ತಿಂದಮೇಲೆ ನಿದ್ದೆ ಬರದೆ ಇರ್ತದಾ ? ಬಿಸಿ ಬಿಸಿ ಅನ್ನ ಸಾರು ತಿನ್ನದೇ ಇರಾಕ್ ಆಯಿತದಾ .. ? CRP ಬರೋದಿಲ್ಲಾ ನಾವೇನು ಮಾಡಾಣ ಅವರ್ ಕೇಳಿದ್ ಡೇಟಾ ಕೊಡದೆ ಡ್ರಾಮಾ ಆಡ್ಸೋಣಾ ...   II ೧ II ಒಂದೊಂದು ಸ್ಕೂಲಲ್ಲೂ ಬೇರ್ ಬೇರೆ ಟೀಚರ್ ಅಲ್ಲೊಬ್ರು ಸೂಪರ್ ಇಲ್ಲೊಬ್ರು ಪಾಪರ್ ಓದಿಸೋ ನಮ್ ಮೇಷ್ಟ್ರು , ಇಲಾಖೆ ಆಪೀಸರ್ರು ಸುಸ್ತಾಗಿ ಮಲಗವರೆ ಯಾರಪ್ಪ ಎಬ್ಬಿಸೋರು …..             ಯಾವನೋ ಕಟ್ಸಿ ಹೋದ ಹಳೇ ಬಿಲ್ಡಂಗ್ ಈ ಸ್ಕೂಲು             ಡೋರ್ ಹಾಕ್ಕೊಂಡ್ ಹೋಗಿ ಮೇಷ್ಟ್ರೇ ನಿಲ್ಲಬೇಡಿ ನೀವೆಲ್ಲು             BEO ರೋಡಲ್ ಸಿಕ್ರೆ ನಾವೇನ್ ಮಾಡೋಣ             ಅವರೀಗು ಕಾಣಿಸ್ದಂಗೆ ಎಸ್ಕೇಪ್ ಆಗೋಣ .....  II ೧ 11 ಸಂಬಳ ಕೊಡೋನು ಮೇಲೆ ಕುಂತವ್ನೆ ನಮಗೆ ನಿಮಗೆ ಯ
ಅಮ್ಮನ ಕವನ                                                                ಏನಾಗುವನೋ ಇವನೇನಾಗುವನೋ ಸಿಕ್ಕ ಸಿಕ್ಕಿದ್ದನ್ಲಲ್ಲಾ ಭಕ್ಷಿಸುವನೋ ರಕ್ಷಣಾ ಪಡೆಗೇನಾದರು ಸೇರುವನೋ ಸಣ್ಣ ವಿಷಯಕ್ಕೆ ಕೋಪಿಸಿಕೊಳ್ಳುವನು BMTC ಕಂಡಕ್ಟರನಾಗುವನೋ..... ಏನಾಗುವನೋ ಇವನೇನಾಗುವನೋ ಸಿಕ್ಕ ಸಿಕ್ಕವರಿಗೆಲ್ಲಾ ಹೊಡೆಯುವನೋ ಕೋಪಿಷ್ಟ ಪೋಲಿಸ್ ಪೇದೆಯಾಗುವನೋ ನಿಂತಲ್ಲಿ ನಿಲ್ಲದೆ ಓಡುವನೋ ಇವನೇನಾದರೂ ಅಂಚೆ ಮಾಸ್ತರನಾಗುವನೋ..... ಏನಾಗುವನೋ ಇವನೇನಾಗುವನೋ ಕಂಡ ಕಂಡವರನ್ನೆಲ್ಲಾ ಪೀಡಿಸುವನೋ ವಿಮಾ ಪಾಲಿಸಿ ಏಜೆಂಟನಾಗುವನೋ ಕಂಡ ಕಂಡವರ ಹತ್ತಿರ ಕೈ ಚಾಚುವನೋ ಸರಕಾರಿ ಕಛೇರಿ ನೌಕರನಾಗುವನೋ..... ಏನಾಗುವನೋ ಇವನೇನಾಗುವನೋ ಯಾವಾಗಲೂ ಗುಂಪುಗಾರಿಕೆ ಮಾಡುವನೋ ರಾಜಕೀಯ ಮರಿ ಪುಢಾರಿಯಾಗುವನೋ ಒಬ್ಬನೇ  ಪಟ ಪಟ ಮಾತನಾಡುವನೋ ಕಾಲೇಜು ಉಪನ್ಯಾಸಕನಾಗುವನೋ..... ಏನಾಗುವನೋ ಇವನೇನಾಗುವನೋ ತಾಯಿಯಲ್ಲಿ ಹೆಚ್ಚು ಪ್ರೀತಿ  ಇಟ್ಟಿರುವನು ಅಪ್ಪಟ ಕನ್ನಡದ ಕಂದ  ಇವನಾಗುವನು.........                                        :- ಕನ್ನಡ ವೆಂಕಿ                                           24-04-2004
ಮನದಾಳದ ಮಾತುಗಳನ್ನು , ಮನಸ್ಸಿನ ತುಡಿತಗಳನ್ನು, ಜೀವನದ ಕಾತರಗಳನ್ನು ನಿಮ್ಮೆಲ್ಲರೊಡನೆ ಹಂಚಿಕೊಳ್ಳುವ ಬಯಕೆಯಿಂದ ,  ಈ ಬ್ಲಾಗ್  ಇಂದು ಸೃಷ್ಟಿಯಾಯಿತು......... ನಿಮ್ಮ ಮನ ತಣಿಸುವ ಲೇಖನಗಳನ್ನು ಅತೀ ಶೀಘ್ರದಲ್ಲಿಯೇ ಪ್ರಕಟಿಸುತ್ತೇನೆ.....