ಪೋಸ್ಟ್‌ಗಳು

ಜನವರಿ 2, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸತ್ಯ-ಮಿಥ್ಯ

ಈ ಜೀವನವೇ ಒಂದು ಸತ್ಯ - ಮಿಥ್ಯಗಳ ಗೂಡು ಸತ್ಯದ ಹಾದಿಯಲ್ಲಿ ನಡೆದವನಿಗೆ ಸಿಕ್ಕಿದ್ದು ಸುಡುಗಾಡು ಸುಳ್ಳುಗಳ ಜಾಡಲ್ಲೇ ಸಾಗಬೇಕಿದೆ ಬದುಕಿನ ಹಾಡು ಸತ್ಯಶೋಧನೆ ಯ ಯೋಚನೆಯ ಕಿತ್ತು ಬಿಸಾಡು ಸುಳ್ಳುಗಳ ಬಂಡಿಯ ಮೇಲೆಯೇ ಎಲ್ಲರೊಡನೆ ನೀ ಓಡು ... ಓಡು .. ಓಡ ...!                                                                -ವೆಂಕಟೇಶ್

ದೂರ ಸರಿದವರು

   ಅತ್ಮಿಯರೇ, ಸುಮಾರು ಎರಡು ವರ್ಷ ಒಂದು ಕುಟುಂಬವಾಗಿ ನನ್ನೊಡನಿದ್ದ ಸಿಲ್ಯಾಂಪ್ಸ್ ಸ್ನೇಹಿತರಿಗಾಗಿ ಈ ಅಕ್ಷರ ನಮನ....  ಅರಿವಿಲ್ಲದೆ ಹನಿ ಜಾರುತಿಹುದು ದನಿಯಿಲ್ಲದೆ ಮನ ಬಿಕ್ಕಳಿಸುತಲಿಹುದು ದೂರವಾಗುವ ದಿನ ಇಂದೇ ಏಕೆ ಬಂದಿಹುದು ಅಲೆಮಾರಿ ಜೀವನದಲಿ ಊರ ಸೆಲೆ ತಂದವರು  ಮತ್ತೆ ಭೇಟಿ ಯಾಗುವೆ ಎನ್ನುತ್ತಾ ಮತ್ತೆ ಇಂದು ದೂರ ಸರಿಯುತಿರುವರು , ಕಳೆದ ಎರಡು ವರುಷದ ಹಲವು ಹರುಷಕೆ ಕಾರಣರಾದವರು ಇಂದು ಕಣ್ಣೊಳು ಕಂಬನಿ ಬಿರಿಯುತ್ತ ಹೊಸ್ತಿಲಲಿ ನಿಂತಿಹರು ಒಳಗೆ ಮನ ಅಳುತ್ತಿದ್ದರು ಮುಗುಳ್ನಗೆ ಬೀರುತಾ ನಗುತ್ತಿರುವರು ಎಲ್ಲೇ ಹೋದರು ಸಂತೋಷ ನಿಮ್ಮ ಪಾಲಿಗಿರಲಿ ಪ್ರತಿ ಹೆಜ್ಜೆಗೂ ನಗೆ ಹೂವು ಅರಳುತ ಶುಭ ಕೋರಲಿ ನನ್ನ ನೆನಪಿನ ಭುತ್ತಿಲಿ  ನಿಮ್ಮ ಪಾಲು ಎಂದೆಂದಿಗೂ ಇರಲಿ                              -ವೆಂಕಟೇಶ್

ಪ್ರೀತಿಯ ಕಹಾನಿ……….

ನಿಂತಾಗ ಪಯಸ್ವಿನಿ ನದಿಯ ತೂಗು ಸೇತುವೆಯ ಮೇಲೆ ಮನದ ಮೂಲೆಯಲ್ಲಿ ಶುರುವಾಯಿತು ಎಂಥದೋ ಸೆಲೆ ಕೇಳಿಬರುತ್ತಿತ್ತು ಶಾಂತ ಪ್ರವಾಹದ ನೀರಿನ ಜುಳು ಜುಳು ಹರಿದಾಡಿದಂತೆ ಭಾಸವಾಯಿತು ಎದೆಯೊಳಗೆ ಮಿಂಚು ಹುಳು ಬೀಳುತ್ತಲಿತ್ತು ಒಂದೇ ಸಮನೆ ತುಂತುರು ಹನಿ ಹನಿಯ ರಭಸಕ್ಕೆ ಕರಗುತ್ತಲಿತ್ತು ಎಲೆಯ ಮೇಲಿನ ಹನಿ ಇಬ್ಬನಿ ಹೊರಬರಲಾಗದೇ ಚಡಪಡಿಸುತಿತ್ತು ಮನದಾಳದ ಪಿಸುಧ್ವನಿ ಮನಸ್ಸಿನೊಳಗೆ ಬರವಣಿಗೆ ಆರಂಬಿಸಿತ್ತು ಬರೆಯಲು ಪ್ರೀತಿಯ ಕಹಾನಿ……… .                         - ಕನ್ನಡ ವೆಂಕಿ (ವೆಂಕಟೇಶ್)

ಬೆಳದಿಂಗಳ ರಾತ್ರಿ

ಮಲಗಿದ್ದೆ ನಾ ಹುಣ್ಣಿಮೆಯ ಬೆಳದಿಂಗಳ ರಾತ್ರಿ ನನಗಿತ್ತು ಚಲುವೆ ಕನಸಿನಲ್ಲಿ ಬರುವಳೆಂಬ ಖಾತ್ರಿ ಕಣ್ಣು ಮುಚ್ಚದೇ ಅವಳಿಗಾಗಿ ಕಾದಿದ್ದೇ ಕಣ್ಣು ಮುಚ್ಚಿದರೇ ತಾನೆ ಕನಸು ಎಂಬ ಸತ್ಯ ತಿಳಿಯದೇ ಹೋದೆ… . ಬಳುಕುತ್ತಾ ಬಂದಳು ಚಲುವೆ ಬಳಿಯಲ್ಲಿ ಅಂದೇಕೋ ಎಂದೂ ಕಾಣದ ಚೆಲುವು ಅಂದು ಅವಳ ಕಣ್ಣಲ್ಲಿ ಬೀರಿದಳೋಮ್ಮೆ ಮೈಮರೆಸುವ ಮೋಹಕ ನಗೆ ಪದಗಳೇ ಇಲ್ಲ ವರ್ಣಿಸಲು ಆ ನಗೆಯ ಬಗೆ ಕಾಡಿದಳು ನೋಡುತ್ತಾ ಕಣ್ಣಲ್ಲಿ ಕಣ್ಣಿಟ್ಟು ಬೇಡಿದಳು ಪ್ರೀತಿಯ ಮನಸ್ಸಲ್ಲಿ ಮನಸಿಟ್ಟು ಮನಸ್ಸು ಬಯಸಿತ್ತು ಮೋಹಕ ಆಲಿಂಗನ ಮನಸ್ಸು ಬಯಸಿರಲಿಲ್ಲ ಆದರೂ ನೀಡಿದಳು ಸಿಹಿಚುಂಬನ ..!!                                      ;- ವೆಂಕಟೇಶ್  

ಅವಳ ಜೊತೆ

ನಡೆಯುವಾಗ ತುಂತುರು ಮಳೆಯಲ್ಲಿ ಅವಳ ಜೊತೆ ಮುತ್ತಿನ ಹನಿಗಳ ರೋಮಾಂಚನಕ್ಕೆ ನಾ ಮನಸೋತೆ ಮನದ ಮೂಲೆಯಲ್ಲಿ ಮೂಡಿ ಬಂತು ಪ್ರೇಮದ ಕವಿತೆ ಅವಳ ಸಿಹಿ ಚುಂಬನದ ಸವಿಯಲ್ಲಿ ನಾ ಎಲ್ಲ ಮರೆತೆ                         :- ವೆಂಕಟೇಶ್

ಅವಳ ನಲ್ಲ….!!!

ವಯಸ್ಸು 28 ಆಯಿತಲ್ಲ ಎಷ್ಟು ಹು ಡು ಕಿದರು ಕನಸಿನ ಮನದನ್ನೆ ಸಿಗಲಿಲ್ಲ ಇದೇ ಬೇಸರದಿ ಮು ಸ್ಸಂಜೆ ನದಿತೀರದಲ್ಲಿ ಕು ಳಿತೆನಲ್ಲ ಮು ಳು ಗು ತಿದ್ದ ಸೂ ರ್ಯನಿಗೆ ಎದು ರಾಗಿ ಸುಂದರ ಚಲು ವೆಯೊಬ್ಬಳು ನಗೆ ಚೆಲ್ಲು ತ್ತಾ ನನ್ನೆಡೆಗೆ ಬರು ತ್ತಿದ್ದಳಲ್ಲಾ… ಅವಳನ್ನು ನೋಡಿ ಕೆಂಪಾಗಿತ್ತು ನನ್ನ ಗಲ್ಲ ನನ್ನ ಕಡೆ ನೋಡಿ ಒಮ್ಮೆ ಹುಸಿನಗೆಯ ಬೀರಿದಳಲ್ಲ ಮನದೊಳಗೆ ಮಿಂಚು ಹರಿದಾಡಿದಂತಾಯಿತಲ್ಲ ಮಾತನಾಡಿಸೋಣ ಎಂದು ಹು ಮ್ಮಸ್ಸಿನಿಂದ ಎದ್ದು ನಿಂತರೆ ……………………………………………… . ಅವಳ ಹಿಂದೆಯೇ ಬರು ತ್ತಿದ್ದನಲ್ಲ .... ಅವಳ ನಲ್ಲ… .!!! :- ವೆಂಕಟೇಶ್

ಅವಳೊಡನಿದ್ದ ಆ ಕ್ಷಣ...

ಮುತ್ತಿಡುವಂತೆ ಒಂದೇ ಸಮನೆ ಸುರಿಯುತ್ತಿದ್ದ ಆ ಮಳೆಯಲ್ಲಿ ತಣ್ಣನೆ ಬೀಸುತ್ತಿದ್ದ ತಂಗಾಳಿಯ ಚುಮು ಚುಮು ಚಳಿಯಲ್ಲಿ ಸುತ್ತ ಮುತ್ತ ಯಾರು ಇರದ ಆ ದಾರಿಯಲ್ಲಿ ಎಷ್ಟು ದೂರ ಸಾಗಿದರೂ ಮುಗಿಯದ ಆ ಪಯಣದಲ್ಲಿ ಏನೇನೋ ಬಯಸುತ್ತಿದ್ದ ಆ ಕಂಗಳ ನೋಟದಲ್ಲಿ ಆಹಾ ಎಂಥ ರೋಮಾಂಚನ , ಮಧುರ ಅಮರ ಅವಳೊಡನಿದ್ದ ಆ ಕ್ಷಣ ... ಅಂಗೈಯ ಬೊಗಸೆಯಲ್ಲಿ ಅವಳ ಮುಖವ ಹಿಡಿದು ಬೆರಳುಗಳಲ್ಲಿ ಮುಂಗುರುಳೊಡನೆ ಆಟವಾಡುತ್ತಿರೆ ಮರವನ್ನು ಬಾಚಿ ಹಬ್ಬಿದ ಬಳ್ಳಿಯಂತೆ ತಬ್ಬಿನಿಂತು ನಾಚಿ ನೀರಾಗಿ ಮೊಗ್ಗಾದಳು ಅವಳು .... ನಾಚಿಕೆಯಲ್ಲಿ ಅದುರಿತ್ತಿದ್ದ ಅಧರಗಳಲ್ಲಿ ಮಧುರ ಸಿಹಿ ಜೇನು ಸುರಿಯುತ್ತಿತ್ತು ಜೇನು ಹೀರುವ ಕಾತರ ಅವನ ಕಣ್ಣಲ್ಲಿತ್ತು ಸನಿಹ ಬಂದವನನ್ನು ತಡೆದ ಅವಳ ಧ್ವನಿ ಕಂಪಿಸುತ್ತಿತ್ತು ಅವಳ ಕಣ್ನ ಕಮಲದ ಕನ್ನಡಿಯಲ್ಲಿ ಇವನದೇ ಬಿಂಬ ಕಾಣುತ್ತಿತ್ತು .                                                       - ಕನ್ನಡವೆಂಕಿ