ಪೋಸ್ಟ್‌ಗಳು

2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅವಳೇ ನನ್ನಮ್ಮ...

ಅವಳಿರದಿದ್ದರೆ ನನ್ನದೆಂಬುದೊಂದು ಅಸ್ತಿತ್ವವೇ ಇಂದು ಇರುತ್ತಿರಲಿಲ್ಲ  ಅವಳ ಬಿಟ್ಟು ಬೇರಾರಿಗೂ ಈ ಏಳು-ಬೀಳಿನ ಜೀವನದ ಪಾಠವ ಇಷ್ಟು ಚನ್ನಾಗಿ ಕಲಿಸಲು ಸಾಧ್ಯವಿಲ್ಲ ಅವಳಿದ್ದರೇ ಎಲ್ಲಾ ಅವಳಿರದಿದ್ದರೆ ನನ್ನದೇನೂ ಇಲ್ಲ... ಗುರುವೆಂದರೇ ಅವಳೇ ನನ್ನಮ್ಮ... ಪುಟ್ಟ ಕಂದನ ಮೊದಲ ತೊದಲು ನುಡಿ ಅದುವೇ ಅಮ್ಮ ಎಡವಿ ಬಿದ್ದು ಪೆಟ್ಟು ತಿಂದಾಗೆಲ್ಲಾ ಅರಿವಿಲ್ಲದೇಯೇ ಬರುವ ಉದ್ಗಾರವೇ ಅಮ್ಮ ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ನಿಂತ ಸ್ತ್ರೀಯೆಂದರೆ ಅವಳೇ ನನ್ನಮ್ಮ... ಅವ್ವ ಎಂಬುದು ಕೇವಲ ಎರಡೂವರೆ ಅಕ್ಷರ ಆ ಹೆಸರಿನೊಳಗಿನ ಭಾವನೆಗಳು ಮಾತ್ರ ಸಾವಿರ ಸಾವಿರ ಪೂಜಿಸುವದರಲ್ಲೇನುಂಟು ಸುಖ ಆ ಕಲ್ಲು ದೇವರ ಕರುಳಬಳ್ಳಿಯನಂಚಿಕೊಂಡ ಈ ದೇವತೆಯ ಪೂಜಿಸೋಣ,  ಅದುವೇ ಜೀವನದ ಸಾಕ್ಷಾತ್ಕಾರ.. ದೇವತೆಯೆಂದರೇ ಅವಳೇ ನನ್ನಮ್ಮ ಅಮ್ಮಂದಿರ ದಿನಾಚರಣೆಯ ಸಂದರ್ಭದಲ್ಲಿ ಈ ಕವನದ ಮೂಲಕ ಎಲ್ಲಾ ಅಮ್ಮಂದಿರಿಗೂ ನನ್ನ ನಮನ

ಯುಗಾದಿ ಹಬ್ಬದ ಶುಭಾಶಯಗಳು ...

ಇಮೇಜ್
ಹಳೆಯದು ಕಳೆದು ಹೊಸದಾಗಿ ಬಂದಿದೆ ಯುಗಾದಿ ಕಹಿ ಸಿಹಿ ಜೀವನದೊಂದಿಗೆ ಆಚರಿಸೋಣ ಸಂಭ್ರಮದಿ ನೋವುಂಟು ನಲಿವುಂಟು ಎಲ್ಲರ ಜೀವನದಲ್ಲೂ ಶಾಶ್ವತವಲ್ಲ ಈ ನೋವು ಎಲ್ಲಾ ಕಾಲದಲ್ಲೂ ಬೇವು ಬೆಲ್ಲದ ಸವಿಯಲ್ಲಿಕಷ್ಟ ಸುಖ ಬೆರೆತಿರುವುದಂತೆ ಹಳೇಬೇರಿನಿಂದ ಹೊಸ ಚಿಗುರು ಬರುವಂತೆ ಹಿಂದಿನ ಕಹಿನೆನಪುಗಳು ಬತ್ತಿಹೋಗಲಿ ಮುಂದಿನ ಜೀವನ ಸಂತೋಷದ ಕಾರಂಜಿಯಾಗಲಿ ಗೆಲ್ಲುವ ಭರವಸೆಯ ಬೆಳಕು ಮೂಡಿಸಲಿ ಈ  ಜಯ ಸಂವತ್ಸರ ಮರೆಯಾಗಲಿ ಕೊನೆಯಾಗಲಿ ನಮ್ಮೊಳಗಿನ ದ್ವೇಷ ಮತ್ಸರ..... ಯುಗಾದಿ ಹಬ್ಬದ  ಶುಭಾಶಯಗಳು ...

ಮಹಿಳಾ ದಿನಾಚರಣೆಯ ಶುಭಾಶಯಗಳು .....

ಇಮೇಜ್
ಮಹಿಳಾ ದಿನದ ಅರ್ಥ ಪೂರ್ಣ ಆಚರಣೆ ಆಗಬೇಕಾಗಿರುವುದು - ಒಂದು ದಿನದ ಮಹಿಳಾ ಮಹಿಮೆಯ ಗುಣಗಾನದಿಂದ ಅಲ್ಲ. ನಮ್ಮ ಇಂದಿನ ಸಮಾಜದಲ್ಲಿ, ಇಷ್ಟೊಂದು ವಿಜ್ಞಾನ ತಂತ್ರಜ್ಞಾನದ ಪ್ರಗತಿಯ ದಿನದಲ್ಲಿಯೂ ಮಹಿಳೆಯರು ಎಷ್ಟೊಂದು ಕಷ್ಟಗಳನ್ನು ಎದುರಿಸುತ್ತಿದ್ದಾರೆ, ಬವಣೆ ಪಡುತ್ತಿದ್ದಾರೆ - ಎನ್ನುವುದನ್ನು ಎಲ್ಲರೂ ಮನಗಂಡು, ಆಕೆಗೂ, ಅವಳ ಕನಸುಗಳನ್ನು ನನಸು ಮಾಡುವ ಸಮಯ ಕೊಟ್ಟರೆ, ಆಗ ಮಹಿಳಾ ದಿನಕ್ಕೆ ಅರ್ಥ ಬರಲು ಸಾಧ್ಯ. ಎಲ್ಲರಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳು ..... ಜಗಬೆಳಗೋ ಸೂರ್ಯನಿಗುಂಟು ರಾತ್ರಿಯ ಬಿಡುವು ಬಾನ ಚಂದ್ರನಿಗುಂಟು ಅರ್ಧ ತಿಂಗಳ ಗಡುವು ಮಾನವೀಯತೆಯ ಶಕ್ತಿಯಾಗಿ ಸಮಾಜದ ಕನ್ನಡಿಯಾಗಿ ಮುಪ್ಪಲ್ಲಿ ಮರೆಯುವ ಮಕ್ಕಳಿಗೆ ತಾಯಿಯಾಗಿ ದಂಡಿಸುವ ಗಂಡನಿಗೆ  ನಿಸ್ಸಾಹಯಕ ಹೆಂಡತಿಯಾಗಿ ದಾರಿ ತಪ್ಪಿದ ತಮ್ಮನ ತಿದ್ದುವ ಅಕ್ಕನಾಗಿ ನೋವು ನಲಿವು ಹಂಚಿಕೊಳ್ಳುವ  ಅಣ್ಣನಿಗೆ ತಂಗಿಯಾಗಿ ಒಲುಮೆಯ ಗೆಳಯನಿಗೆ ಗೆಳತಿಯಾಗಿ ಸದಾ ದುಡಿಯುವ ಈ ಹೆಣ್ಣಿಗೆಲ್ಲುಂಟು ಬಿಡುವು.......! ಹೆಣ್ಣಿಂದಲೇ ಭೂಮಿಗೆ ಬಂದವರಿಗೆ ಹೆಣ್ಣು ಎಂದಾಕ್ಷಣ ಅದೇಕೋ ಕಾಣೆ ಬೇಸರ ಮೊಲೆಯುಣಿಸಿ ಬೆಳೆಸಿದವಳ ಮೇಲೆ ತಾತ್ಸಾರ ಹೇಳಿಕೊಳ್ಳಲು ಮಾತ್ರ ಪ್ರಕೃತಿ ಹೆಣ್ಣು ಭೂಮಿ ಹೆಣ್ಣು , ಭಾರತಾಂಬೆ ಹೆಣ್ಣು, ನದಿ ಹೆಣ್ಣು ಸಂಪತ್ತು ಹೆಣ್ಣು.... ಆದರೆ ವಾಸ್ತವದಲ್ಲಿ ಇನ್ನು ಬೆಳಕು ಕಾಣದ  ಹೆಣ್ಣು ಭ್ರೂಣದ ಮೇಲೆಯೇ ಎಲ್ಲರ ಕೆಂಗಣ್ಣ

ನನ್ನ ದೇವತೆ..... ನನ್ನವ್ವ

ದಾರಿಯಲಿ ಎಡವಿ ಎದೆಗುಂದಿ ನಿಂತವನಿಗೆ ಧೈರ್ಯ ತುಂಬಿ ಮುನ್ನೆಡೆಸಿದವಳು ಗೆದ್ದು ಬೀಗುತ್ತಿದ್ದವರ ನಡುವೆಯೇ ನನಗೂ ಗೆಲುವಿನ ಹುಚ್ಚು ಹಿಡಿಸಿದವಳು ನನ್ನವ್ವ ಹಂಗಿಸಿದವರ ನಡುವೆ ಗೆದ್ದು ಬಂದಾಗ… ಓಡಲೊಳಗಿನ ನೋವ ತೋರ್ಪಡದೆ ತುಂಬಿಕೊಂಡ ಕಣ್ಣ ಮರೆಮಾಡಿ ನಕ್ಕವಳು ನನ್ನ ಕಣ್ಣೊಳಗೆ ತನ್ನ ಕನಸಿನ ಬೀಜವ ಬಿತ್ತಿ ಹರಿದ ಸೀರೆ ಸೆರಗಿನ ಅಂಚಲಿ ಕಣ್ಣೊರೆಸಿಕೊಂಡವಳು ನನ್ನವ್ವ ತಾನು ಕಲಿತದ್ದು ಮೂರಕ್ಷರವಾದರೂ ನನಗೆ ಕಲಿಸುವವರ ಮುಂದೆ ನಿಂತು ನನ್ನ ಕಲಿಕೆಯ ಬಗ್ಗೆ ದಿಟ್ಟನುಡಿಗಳಾಡಿದವಳು ನನ್ನೆದುರು ಕೋಪದಲಿ ನಟಿಸಿ ನಾ ಮಾಡಿದ ತಪ್ಪಿಗೆ ಬಾಸುಂಡೆ ಬಾರಿಸಿ ಮರೆಯಲಿ ತನ್ನನ್ನೇ ತಾನು ಹಂಗಿಸಿಕೊಂಡವಳು ನನ್ನವ್ವ ಇಂದು ಅವಳ ಕನಸೆಲ್ಲಾ ಈಡೇರಿದಾಗ ಜಗತ್ತನ್ನೇ ಗೆದ್ದವಳಂತೆ ಒಳಗೊಳಗೆ ಸಂಭ್ರಮಿಸಿದವಳು ಜಗದ ಜನರೆಲ್ಲಾ ಬದಲಾದರೂ ತಾನು ಮಾತ್ರ ಎಳ್ಳಷ್ಟು ಬದಲಾಗದೆ ಇನ್ನಷ್ಟು ಕನಸುಗಳೊಡನೆ ನನ್ನೊಡನಿರುವಳು ನನ್ನ ದೇವತೆ..... ನನ್ನವ್ವ                                                   -ಕನ್ನಡವೆಂಕಿ

ಅವ್ವ ನನಗೆ ಕೊಡಲೇ ಇಲ್ಲ ಮುತ್ತು

ಅವ್ವ ನನಗೆ ಕೊಡಲೇ ಇಲ್ಲ ಮುತ್ತು ಅವಳಿಗೆ ಇರಲೇ ಇಲ್ಲ ಅಷ್ಟು ಪುರುಸೊತ್ತು ಸದಾ ದುಡಿಯಬೇಕಿತ್ತು ಹವಣಿಸಲು ನಮಗೆ ತುತ್ತು ಮೈಯೆಲ್ಲಾ ತೇಪೆ ಹಾಕಿದ ಸೀರೆ ಅವಳ ಸೊರಗಿದ ದೇಹವ ಮುಚ್ಚಲು ಪ್ರಯತ್ನಿಸುತಿತ್ತು ಅಂದು ಅಪ್ಪ-ಅವ್ವ ದುಡಿದು ತಂದದ್ದು ನಮ್ಮ ಹೊಟ್ಟೆಗೇ ಸಾಕಾಗುತಿತ್ತು ತಪ್ಪಲೆಯ ತಳದಲ್ಲಿನ ಗಂಜಿ ಮಡಿಕೆಯ ತಣ್ಣೀರು ಅಪ್ಪ-ಅಮ್ಮನಿಗೆ ಮೀಸಲಿತ್ತು ಮತ್ತೇ ಮುಂದೆ  ನಾಳೆಗೆ ಏನೂ ಎಂಬ ಅದೇ ಚಿಂತೆ ಅವರ ಕಾಡುತಿತ್ತು ಅಂದು ನನ್ನ ಬುದ್ದಿವಂತಿಕೆ ಕಂಡು ಸಂತೋಷದಿ ಬೆನ್ನು  ತಟ್ಟಿದ ಕೈ ಕೇವಲ ನನ್ನ ಅವ್ವನದಾಗಿತ್ತು ಇಂದು ಎಲ್ಲರು ನನ್ನ ಹೊಗಳಿ  ಬೆನ್ನು ತಟ್ಟುವಾಗ ನನ್ನವ್ವ ನ ಕೈ ಮಾತ್ರ ಕಣ್ಣೊರೆಸಿಕೊಳ್ತಿತ್ತು .             ವೆಂಕಟೇಶ್ . ೨೧.೦೧.೨೦೧೪

ಅವಳು-ಅವನು..!

ಭೇಟಿಗೆ ಕಾತರಿಸಿದೆ ಮನ ಸಿಗುವೆಯಾ ಎಂದೊಡನೆ ಒಪ್ಪಿದಳು ಅವಳು ಮೈ ಮನಸ ಗಾಳಿಯಲಿ ತೇಲಿ ಬಿಟ್ಟು ಅವಳ ಹೆಜ್ಜೆ ಸದ್ದಿಗೆ ಕಾದು ಕುಳಿತನು ಅವನು ಮೋಡಕ್ಕೆ ಮುತ್ತಿಡಲು ಹೊರಟ ಹಕ್ಕಿಯಂತೆ ಗಾಳಿಯಲಿ ತೇಲುತ್ತಾ ಬಂದಳು ಅವಳು ಬಂದು ಮುಂದೆ ನಿಂತವಳನ್ನೊಮ್ಮೆ ದಿಟ್ಟಿಸಿ ನೋಡಿ ಏನೂ ತೋಚದೇ ಗೊಂದಲದ ಗೂಡಾದನು ಅವನು ಬರಸೆಳೆದು ಅಪ್ಪಿಕೊಂಡ ಅವನ ತೋಳಲ್ಲಿ ಗೂಡಲ್ಲಿ ಬಚ್ಚಿಟ್ಟುಕೊಂಡ ಗುಬ್ಬಿಯಾದಳು ಅವಳು ಪ್ರೀತಿ ತುಂಬಿದ ಆ ಕಂಗಳ ಕಂಡು ಗರಿಬಿಚ್ಚಿದ ನವಿಲಿಂತೆ ಸಂಭ್ರಮಿಸಿದನು ಅವನು ಅವನೆದೆಯ ಪೊದೆಗೂದಲಲ್ಲಿ ಮುಖವಿಟ್ಟು ನಿದ್ರಿಸುತಿರೆ ಅವಳು ಬಿಸಿಯುಸಿರು ತಾಗಿ ನಿದ್ರೆಗೆ ಭಂಗವಾಗುವುದೆಂದು ಉಸಿರಾಡುವುದನ್ನೇ ಮರೆತನು ಅವನು ಅವನೆದೆ ಬಡಿತದ ಇಂಪಾದ ಸಂಗೀತದಲ್ಲಿ ಅವಳದೇ ಹೆಸರಿನ ಸ್ವರ ಕೇಳಿ ಕನಸಿಗೆ ಜಾರಿದಳು ಅವಳು ಅವಳ ಮುಡಿಯ ಮಲ್ಲಿಗೆಯ ಪರಿಮಳದಿ ತನ್ನ ಕನಸ ಮರೆತು ಅವಳ ಕನಸೊಳಗೆ ಒಂದಾದನು ಅವನು.....                                              - ಕನ್ನಡವೆಂಕಿ ೧೦.೦೧.೧೪

ಸಂಕ್ರಾಂತಿ ಶುಭಾಶಯಗಳು

ಮನಸ್ಸು-ಮನಸ್ಸುಗಳ ನಡುವಿನ ಕಾರ್ಮೋಡ ಸರಿದು ಸಮೃದ್ದ ಸೋದರತೆಯಲಿ ಮೂಡಲಿ ಶುಭಶಾಂತಿ ಕಾದು ಒಣಗಿದ ಇಳೆಗೆ  ವರ್ಷಧಾರೆಯಾಗುವಂತೆ ನೊಂದ ಮನಸ್ಸುಗಳಿಗೆ ಭರವಸೆಯ ಬೆಳಕಾಗಲಿ ಈ ಸಂಕ್ರಾಂತಿ ಸಂಕ್ರಾಂತಿ ಬರಲಿ  ಬತ್ತಿದ ನದಿಗೆ ಬಂದ ಗಂಗೆಯಾಗಿ ಬೀಸಲಿ ತಂಗಾಳಿ ಮುದ ನೀಡುತಾ ಮನಕ್ಕೆ ಪ್ರಸನ್ನವಾಗಿ ತೂಗುತಿವೆ ಹೊಲಗದ್ದೆಗಳಲ್ಲಿ ತೆನೆಗಳು ಭಾರವಾಗಿ ರೈತನ ಮನೆ ತುಂಬುತ್ತಿವೆ ಬೆಳೆಗಳು  ಬಂಗಾರವಾಗಿ ಈ ಸಂಕ್ರಾಂತಿ ನೀಡಲಿ ದುಡಿದ ಜೀವಗಳಿಗೆ ನವಚೇತನ ಸೂರ್ಯ ಕಿರಣಕೆ ಮೈಯೊಡ್ಡಿ  ತುಂಬಲಿ ಹೊಸತನ ನನಸಾಗುವ ಹೊಸ  ಕನಸುಗಳಿಗೆ ಚೇತನವ ತುಂಬಲು ನೆರವಾಗಿ ಬರಲಿ ಈ ಸಂಕ್ರಾಂತಿ ಎಲ್ಲರಿಗೂ ವರವಾಗಿ :-ವೆಂಕಟೇಶ್ 

ಶಾಲೆಯ ಸಮೀಪ ಧೂಮಪಾನ ನಿಷೇದ

ಶಾಲೆಯ ಸಮೀಪ ಧೂಮಪಾನ ನಿಷೇದ ಎಂಬ ಗೋಡೆಬರಹ ಬರೆಯುತ್ತಿದ್ದ ಪೈಂಟರ್ ನ ಬಾಯಲ್ಲಿ ಸಿಗರೇಟಿತ್ತು ಆ ಸಿಗರೇಟಿನಿಂದ ಹೊರಹೊಮ್ಮಿದ ಹೊಗೆ ಅಲೆ ಅಲೆಯಾಗಿ ತೇಲಿ ಬಂದಿತ್ತು ಪಾಠ ಹೇಳುತ್ತಿದ್ದ ಶಿಕ್ಷಕನ ಮೂಗಿದೆ ಬಡಿದಿತ್ತು ಅವನ ತಲೆ ಕೆಡಿಸಿತ್ತು ಆ ಕ್ಷಣಕ್ಕೆ ಕೈಬೆರಳ ನಡುವಿದ್ದ ಬಿಳಿ ಬಳಪ ಶಿಕ್ಷಕನಿಗೆ ಸಿಗರೇಟಿನಂತೆ ಗೋಚರಿಸಿತ್ತು ಜೇಬಲ್ಲಿ ಅಡಗಿ ಕುಳಿತಿದ್ದ ಸಿಗರೇಟು ಪೈಂಟರ್ ನವನ ಬಳಿ ಬೆಂಕಿ ಕೇಳಲು ಕಾತರಿಸಿತ್ತು ತರಗಿತಿಯಿಂದ ಹೊರಬಂದ ಶಿಕ್ಷಕನನ್ನು ಶಾಲೆಯ ಹಿಂದಿನ ಬೇಲಿ ಕೈ ಬೀಸಿ ಕರೆಯುತಿತ್ತು ಬೇಲಿಯ  ಹಿಂದಿನಿಂದ ಬಂದ ವಾಸನೆ ಕೊನೆಯ ಬೆಂಚಿನಲ್ಲಿ ನಿದ್ದೆ ಮಾಡುತಿದ್ದ ತರಲೆ ಗುಂಡನ ಮೂಗಿಗೆ ಬಡಿದಿತ್ತು ಥಟ್ಟನೆ ಎಚ್ಚರಗೊಂಡ ಗುಂಡನಿಗೆ ಮನೆಯಲ್ಲಿ ಅಪ್ಪ ಸೇದಿ ಬೀಸಾಡಿದ ತುಂಡುಬೀಡಿ ಕೈ ಬೀಸಿ ಕರೆದಂತೆ ಭಾಸವಾಯಿತು....                                                  -ಕನ್ನಡವೆಂಕಿ

ಸತ್ಯ-ಮಿಥ್ಯ

ಈ ಜೀವನವೇ ಒಂದು ಸತ್ಯ - ಮಿಥ್ಯಗಳ ಗೂಡು ಸತ್ಯದ ಹಾದಿಯಲ್ಲಿ ನಡೆದವನಿಗೆ ಸಿಕ್ಕಿದ್ದು ಸುಡುಗಾಡು ಸುಳ್ಳುಗಳ ಜಾಡಲ್ಲೇ ಸಾಗಬೇಕಿದೆ ಬದುಕಿನ ಹಾಡು ಸತ್ಯಶೋಧನೆ ಯ ಯೋಚನೆಯ ಕಿತ್ತು ಬಿಸಾಡು ಸುಳ್ಳುಗಳ ಬಂಡಿಯ ಮೇಲೆಯೇ ಎಲ್ಲರೊಡನೆ ನೀ ಓಡು ... ಓಡು .. ಓಡ ...!                                                                -ವೆಂಕಟೇಶ್

ದೂರ ಸರಿದವರು

   ಅತ್ಮಿಯರೇ, ಸುಮಾರು ಎರಡು ವರ್ಷ ಒಂದು ಕುಟುಂಬವಾಗಿ ನನ್ನೊಡನಿದ್ದ ಸಿಲ್ಯಾಂಪ್ಸ್ ಸ್ನೇಹಿತರಿಗಾಗಿ ಈ ಅಕ್ಷರ ನಮನ....  ಅರಿವಿಲ್ಲದೆ ಹನಿ ಜಾರುತಿಹುದು ದನಿಯಿಲ್ಲದೆ ಮನ ಬಿಕ್ಕಳಿಸುತಲಿಹುದು ದೂರವಾಗುವ ದಿನ ಇಂದೇ ಏಕೆ ಬಂದಿಹುದು ಅಲೆಮಾರಿ ಜೀವನದಲಿ ಊರ ಸೆಲೆ ತಂದವರು  ಮತ್ತೆ ಭೇಟಿ ಯಾಗುವೆ ಎನ್ನುತ್ತಾ ಮತ್ತೆ ಇಂದು ದೂರ ಸರಿಯುತಿರುವರು , ಕಳೆದ ಎರಡು ವರುಷದ ಹಲವು ಹರುಷಕೆ ಕಾರಣರಾದವರು ಇಂದು ಕಣ್ಣೊಳು ಕಂಬನಿ ಬಿರಿಯುತ್ತ ಹೊಸ್ತಿಲಲಿ ನಿಂತಿಹರು ಒಳಗೆ ಮನ ಅಳುತ್ತಿದ್ದರು ಮುಗುಳ್ನಗೆ ಬೀರುತಾ ನಗುತ್ತಿರುವರು ಎಲ್ಲೇ ಹೋದರು ಸಂತೋಷ ನಿಮ್ಮ ಪಾಲಿಗಿರಲಿ ಪ್ರತಿ ಹೆಜ್ಜೆಗೂ ನಗೆ ಹೂವು ಅರಳುತ ಶುಭ ಕೋರಲಿ ನನ್ನ ನೆನಪಿನ ಭುತ್ತಿಲಿ  ನಿಮ್ಮ ಪಾಲು ಎಂದೆಂದಿಗೂ ಇರಲಿ                              -ವೆಂಕಟೇಶ್

ಪ್ರೀತಿಯ ಕಹಾನಿ……….

ನಿಂತಾಗ ಪಯಸ್ವಿನಿ ನದಿಯ ತೂಗು ಸೇತುವೆಯ ಮೇಲೆ ಮನದ ಮೂಲೆಯಲ್ಲಿ ಶುರುವಾಯಿತು ಎಂಥದೋ ಸೆಲೆ ಕೇಳಿಬರುತ್ತಿತ್ತು ಶಾಂತ ಪ್ರವಾಹದ ನೀರಿನ ಜುಳು ಜುಳು ಹರಿದಾಡಿದಂತೆ ಭಾಸವಾಯಿತು ಎದೆಯೊಳಗೆ ಮಿಂಚು ಹುಳು ಬೀಳುತ್ತಲಿತ್ತು ಒಂದೇ ಸಮನೆ ತುಂತುರು ಹನಿ ಹನಿಯ ರಭಸಕ್ಕೆ ಕರಗುತ್ತಲಿತ್ತು ಎಲೆಯ ಮೇಲಿನ ಹನಿ ಇಬ್ಬನಿ ಹೊರಬರಲಾಗದೇ ಚಡಪಡಿಸುತಿತ್ತು ಮನದಾಳದ ಪಿಸುಧ್ವನಿ ಮನಸ್ಸಿನೊಳಗೆ ಬರವಣಿಗೆ ಆರಂಬಿಸಿತ್ತು ಬರೆಯಲು ಪ್ರೀತಿಯ ಕಹಾನಿ……… .                         - ಕನ್ನಡ ವೆಂಕಿ (ವೆಂಕಟೇಶ್)

ಬೆಳದಿಂಗಳ ರಾತ್ರಿ

ಮಲಗಿದ್ದೆ ನಾ ಹುಣ್ಣಿಮೆಯ ಬೆಳದಿಂಗಳ ರಾತ್ರಿ ನನಗಿತ್ತು ಚಲುವೆ ಕನಸಿನಲ್ಲಿ ಬರುವಳೆಂಬ ಖಾತ್ರಿ ಕಣ್ಣು ಮುಚ್ಚದೇ ಅವಳಿಗಾಗಿ ಕಾದಿದ್ದೇ ಕಣ್ಣು ಮುಚ್ಚಿದರೇ ತಾನೆ ಕನಸು ಎಂಬ ಸತ್ಯ ತಿಳಿಯದೇ ಹೋದೆ… . ಬಳುಕುತ್ತಾ ಬಂದಳು ಚಲುವೆ ಬಳಿಯಲ್ಲಿ ಅಂದೇಕೋ ಎಂದೂ ಕಾಣದ ಚೆಲುವು ಅಂದು ಅವಳ ಕಣ್ಣಲ್ಲಿ ಬೀರಿದಳೋಮ್ಮೆ ಮೈಮರೆಸುವ ಮೋಹಕ ನಗೆ ಪದಗಳೇ ಇಲ್ಲ ವರ್ಣಿಸಲು ಆ ನಗೆಯ ಬಗೆ ಕಾಡಿದಳು ನೋಡುತ್ತಾ ಕಣ್ಣಲ್ಲಿ ಕಣ್ಣಿಟ್ಟು ಬೇಡಿದಳು ಪ್ರೀತಿಯ ಮನಸ್ಸಲ್ಲಿ ಮನಸಿಟ್ಟು ಮನಸ್ಸು ಬಯಸಿತ್ತು ಮೋಹಕ ಆಲಿಂಗನ ಮನಸ್ಸು ಬಯಸಿರಲಿಲ್ಲ ಆದರೂ ನೀಡಿದಳು ಸಿಹಿಚುಂಬನ ..!!                                      ;- ವೆಂಕಟೇಶ್  

ಅವಳ ಜೊತೆ

ನಡೆಯುವಾಗ ತುಂತುರು ಮಳೆಯಲ್ಲಿ ಅವಳ ಜೊತೆ ಮುತ್ತಿನ ಹನಿಗಳ ರೋಮಾಂಚನಕ್ಕೆ ನಾ ಮನಸೋತೆ ಮನದ ಮೂಲೆಯಲ್ಲಿ ಮೂಡಿ ಬಂತು ಪ್ರೇಮದ ಕವಿತೆ ಅವಳ ಸಿಹಿ ಚುಂಬನದ ಸವಿಯಲ್ಲಿ ನಾ ಎಲ್ಲ ಮರೆತೆ                         :- ವೆಂಕಟೇಶ್

ಅವಳ ನಲ್ಲ….!!!

ವಯಸ್ಸು 28 ಆಯಿತಲ್ಲ ಎಷ್ಟು ಹು ಡು ಕಿದರು ಕನಸಿನ ಮನದನ್ನೆ ಸಿಗಲಿಲ್ಲ ಇದೇ ಬೇಸರದಿ ಮು ಸ್ಸಂಜೆ ನದಿತೀರದಲ್ಲಿ ಕು ಳಿತೆನಲ್ಲ ಮು ಳು ಗು ತಿದ್ದ ಸೂ ರ್ಯನಿಗೆ ಎದು ರಾಗಿ ಸುಂದರ ಚಲು ವೆಯೊಬ್ಬಳು ನಗೆ ಚೆಲ್ಲು ತ್ತಾ ನನ್ನೆಡೆಗೆ ಬರು ತ್ತಿದ್ದಳಲ್ಲಾ… ಅವಳನ್ನು ನೋಡಿ ಕೆಂಪಾಗಿತ್ತು ನನ್ನ ಗಲ್ಲ ನನ್ನ ಕಡೆ ನೋಡಿ ಒಮ್ಮೆ ಹುಸಿನಗೆಯ ಬೀರಿದಳಲ್ಲ ಮನದೊಳಗೆ ಮಿಂಚು ಹರಿದಾಡಿದಂತಾಯಿತಲ್ಲ ಮಾತನಾಡಿಸೋಣ ಎಂದು ಹು ಮ್ಮಸ್ಸಿನಿಂದ ಎದ್ದು ನಿಂತರೆ ……………………………………………… . ಅವಳ ಹಿಂದೆಯೇ ಬರು ತ್ತಿದ್ದನಲ್ಲ .... ಅವಳ ನಲ್ಲ… .!!! :- ವೆಂಕಟೇಶ್

ಅವಳೊಡನಿದ್ದ ಆ ಕ್ಷಣ...

ಮುತ್ತಿಡುವಂತೆ ಒಂದೇ ಸಮನೆ ಸುರಿಯುತ್ತಿದ್ದ ಆ ಮಳೆಯಲ್ಲಿ ತಣ್ಣನೆ ಬೀಸುತ್ತಿದ್ದ ತಂಗಾಳಿಯ ಚುಮು ಚುಮು ಚಳಿಯಲ್ಲಿ ಸುತ್ತ ಮುತ್ತ ಯಾರು ಇರದ ಆ ದಾರಿಯಲ್ಲಿ ಎಷ್ಟು ದೂರ ಸಾಗಿದರೂ ಮುಗಿಯದ ಆ ಪಯಣದಲ್ಲಿ ಏನೇನೋ ಬಯಸುತ್ತಿದ್ದ ಆ ಕಂಗಳ ನೋಟದಲ್ಲಿ ಆಹಾ ಎಂಥ ರೋಮಾಂಚನ , ಮಧುರ ಅಮರ ಅವಳೊಡನಿದ್ದ ಆ ಕ್ಷಣ ... ಅಂಗೈಯ ಬೊಗಸೆಯಲ್ಲಿ ಅವಳ ಮುಖವ ಹಿಡಿದು ಬೆರಳುಗಳಲ್ಲಿ ಮುಂಗುರುಳೊಡನೆ ಆಟವಾಡುತ್ತಿರೆ ಮರವನ್ನು ಬಾಚಿ ಹಬ್ಬಿದ ಬಳ್ಳಿಯಂತೆ ತಬ್ಬಿನಿಂತು ನಾಚಿ ನೀರಾಗಿ ಮೊಗ್ಗಾದಳು ಅವಳು .... ನಾಚಿಕೆಯಲ್ಲಿ ಅದುರಿತ್ತಿದ್ದ ಅಧರಗಳಲ್ಲಿ ಮಧುರ ಸಿಹಿ ಜೇನು ಸುರಿಯುತ್ತಿತ್ತು ಜೇನು ಹೀರುವ ಕಾತರ ಅವನ ಕಣ್ಣಲ್ಲಿತ್ತು ಸನಿಹ ಬಂದವನನ್ನು ತಡೆದ ಅವಳ ಧ್ವನಿ ಕಂಪಿಸುತ್ತಿತ್ತು ಅವಳ ಕಣ್ನ ಕಮಲದ ಕನ್ನಡಿಯಲ್ಲಿ ಇವನದೇ ಬಿಂಬ ಕಾಣುತ್ತಿತ್ತು .                                                       - ಕನ್ನಡವೆಂಕಿ