ಪೋಸ್ಟ್‌ಗಳು

2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹೊಸ ವರ್ಷದ ಶುಭಾಶಯಗಳು...💐💐💐

ನಾವು ಮಾಡೋ ತಪ್ಪುಗಳು ನಮಗೆ ಕಲಿಸೋ ಪಾಠನಾ ಯಾವ ವಿಶ್ವವಿದ್ಯಾಲಯವೂ ಕಲಿಸಲ್ಲ... ಈ ವರ್ಷೊಂದಷ್ಟು ತಪ್ಪುಗಳನ್ನು  ಮಾಡರುತ್ತೇವೆ  ಹಾಗು ಅದರಿಂದ ಒಳ್ಳೆ  ಪಾಠವನ್ನೇ ಕಲಿತಿರುತ್ತೇವೆ, ಮುಂದಿನ ಹೊಸ ವರ್ಷದಲ್ಲಿಯೂ ನಾವೆಲ್ಲ ಇನ್ನು ಹೆಚ್ಚು ತಪ್ಪುಗಳನ್ನು ಮಾಡುತ್ತೇವೆ ಅಂದುಕೊಳ್ಳುತ್ತೇನೆ" ಏಕೆಂದರೆ ನಾವು ತಪ್ಪು ಮಾಡಿದೀವಿ ಅಂದ್ರೆ, ನಾವೇನೋ ಹೊಸತನ್ನು ಪ್ರಯತ್ನಿಸಿದ್ದೀವಿ, ಏನೋ ವಿಶೇಷವಾದದ್ದನ್ನು ಮಾಡಿದ್ದೀವಿ, ಹೊಸ ಕಲಿಕೆಗೆ ನಮ್ಮನ್ನು ನಾವು ತೊಡಗಿಸಿದ್ದೀವಿ,ನಮ್ಮನ್ನು ನಾವು ಬದಲಾಯಿಸಿಕೊಂಡಿದ್ದೀವಿ, ಇದುವರೆವಿಗೂ ಮಾಡದಂತಹದ್ದನ್ನು ಮಾಡಲು ಪ್ರಯತ್ನಿಸಿದ್ದೀವಿ, ಮುಖ್ಯವಾಗಿ ಸೋಮಾರಿಯಾಗಿರದೇ ಏನೋ ಒಂದು ಮಾಡಿದ್ದೀವೀ ಅಂತ ಅರ್ಥ. ಅದಕ್ಕೆಂದೇ ಈ ಹೊಸ ವರ್ಷಕ್ಕೆ ನಿಮಗೆಲ್ಲರಿಗೂ ಮತ್ತು ನನಗೂ ನನ್ನ ಶುಭಾಶಯಗಳೆಂದರೆ, ಬನ್ನಿ ಬದುಕಲು,ಪ್ರೀತಿಸಲು, ವೃತ್ತಿಯಲ್ಲಿ ಮುನ್ನೆಡೆಯಲು, ಜೀವನದ ಗುರಿ ಮುಟ್ಟಲು ಹೊಸ ಹೊಸ ತಪ್ಪುಗಳನ್ನು ಮಾಡೋಣ, ಯಾರು ಮಾಡಿರದ ಪ್ರಯತ್ನಗಳನ್ನು ಮಾಡೋಣ, ತಪ್ಪು ಸರಿ ಯೋಚನೆ ಬೇಡ ಹೊಸತನದ ಕಲಿಕೆಗೆ ತೊಡಗುವ ತಪ್ಪು ಮಾಡೋಣ, ಹೊಸ ಹೊಸ ತಪ್ಪು ಮಾಡೋಣ ಅದರಿಂದ ಜೀವನದ ಪಾಠ ಕಲಿಯೋಣ.. (ಇದು Neil Gaiman ಎಂಬುವವರು ಹೇಳಿದ ಸಾಲುಗಳು) ಹೊಸ ವರ್ಷದಲ್ಲಿಯೂ ಸಹ  ಹೊಸ ಹೊಸ  ತಪ್ಪುಗಳೊಂದಿಗೆ ಹೊಸ ಪಾಠ ಕಲಿಯುತ್ತಾ ಮುನ್ನೆಡೆಯೋಣ.. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು...💐💐💐 ಇಂತಿ ನಿಮ್ಮ  ಪ್ರೀತ

ರೈತನ ಆತ್ಮಹತ್ಯೆ ಮತ್ತು ಪರಿಹಾರ ಧನ

ಇಮೇಜ್
ದಿನಬೆಳಗಾದರೆ ರೈತರ ಆತ್ಮಹತ್ಯೆ ಸುದ್ದಿ  ಮಾಮೂಲಿಯಾಗಿ ಹೋಗಿದೆ, ಪ್ರಾರಂಭದ ದಿನಗಳಲ್ಲಿ   ಮೊದಲ ಪುಟದಲ್ಲಿ ಸುದ್ದಿ ಮಾಡುತ್ತಿದ್ದ ಸುದ್ದಿಪತ್ರಿಕೆಗಳು ಸಹ  ಈಗ  ಮೆತ್ತಾಗಿವೆ, ಹಾಗು ಯಾವುದೋ ಒಮದು ಪುಟದ ಮೂಲೆಯನ್ನು  ಇದಕ್ಕಾಗಿಯೇ ಮೀಸಲಾಗಿಟ್ಟಿವೆ. ಮೊದಮೊದಲು  ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ  ಪೋಟೋಗ್ರಾಫರ್ ಸಮೇತ ಭೇಟಿ ನೀಡಿ ಪೋಸು ಕೊಟ್ಟು  ಸೂತಕದ ಮನೆಯಲ್ಲೂ ತಮ್ಮ ಬೇಳೆ ಬೇಯಿಸಿಕೊಂಡ  ಪುಢಾರಿಗಳು ಸಹ  "ಅಯ್ಯೋ ದಿನಾ ಸಾಯೋರಿಗೆ ಅಳೋರ್ಯಾರು " ಅಂತ ಸುಮ್ಮನಾಗಿದ್ದಾರೆ. ನಾವೆಲ್ಲಾ ಕಾಲೇಜುದಿನಗಳಲ್ಲಿ ಓದುವಾಗ , ರೈತರ  ಬಗೆಗಿನ ನಮ್ಮ ಪಠ್ಯಪುಸ್ತಕದ ಮಾಹಿತಿಗಳಲ್ಲಿ  ರೈತ ಈ ದೇಶದ ಬೆನ್ನೆಲುಬು, ದೇಶ ಕಾಯೋ ಯೋಧ ನಿಗೆ   ಸಮ ಈ ರೈತ ಎಂಬೆಲ್ಲಾ   ಘೋಷಣೆಗಳನ್ನು ಓದಿ  ನಾನು ಒಬ್ಬ ರೈತನ ಮಗನಾಗಿ ಹುಟ್ಟಿದಕ್ಕೆ ಖುಷಿ ಪಟ್ಟಿದೆ. ಆದರೆ  ಈದಿನ ನಮ್ಮ ರೈತರ ಪಾಡನ್ನು ನೋಡಿದರೆ, ರೈತನಾಗಿ ಹುಟ್ಟುವುದೆ ಪಾಪವೆಂದೆನಿಸುತ್ತಿದೆ. ಆತ್ಮಹತ್ಯೆ ಪ್ರಹಸನಗಳಿಗೆ  ಶಾಶ್ವತ ಪರಿಹಾರ  ಕಂಡುಕೊಳ್ಳಬೇಕಿರುವ ಸರ್ಕಾರವೇ ಈಗ ರೈತನ ಆತ್ಮಹತ್ಯೆಯನ್ನು  ಪ್ರೋತ್ಸಾಹಿಸುತ್ತಿದೆ. ಯಾಕೆ ಈ ರೀತಿ ಹೇಳುತ್ತಿದ್ದೇನೆ  ಗೊತ್ತಾ ? ಕಳೆದ ಕೆಲವು ವಾರದ ಹಿಂದೆ ಸರ್ಕಾರವೇ ಘೋಷಣೆ ಮಾಡಿದಂತೆ  ಆತ್ಮಹತ್ಯೆ ಮಾಡಿಕೊಂಡ ರೈತನಿಗೆ ಸರ್ಕಾರದಿಂದ 5 ಲಕ್ಷ ಪರಿಹಾರ ಸಿಗಲಿದೆ. ಈ ಪರಿಹಾರ ,ರೈತ ತೀರಿಕೊಂಡ ಮೇಲೆ  ಆತನ ಕುಟುಂಬಕ್ಕೆ ನೆರವಾಗುತ್ತ

ಹೊಸ ವರ್ಷಾಚರಣೆ....!

"ಏನಪ್ಪಾ ಹೊಸ ವರ್ಷ ಆಚರಣೆಗೆ ಏನು ಪ್ಲಾನ್, ಎಲ್ಲಿ ಹೋಗ್ತೀರಾ..??"  ಒಂದು ವಾರದಿಂದ ಎಲ್ಲಿ ಹೋದ್ರು ಈ ಪ್ರಶ್ನೆ ಸಾಮಾನ್ಯವಾಗಿ ಎಲ್ಲರಿಗೂ  ಬಂದಿರತ್ತೆ, ನನಗೂ ತುಂಬಾ ಜನ ಈ ಪ್ರಶ್ನೆ ಕೇಳಿದ್ರು ಮತ್ತು ನಾನು ಸಹ ಬಹಳ ಮಂದಿಗೆ ಈ ಪ್ರಶ್ನೆ  ಕೇಳಿದ್ದೇನೆ. ನಮ್ಮ ನಮ್ಮ ಮನಸ್ಸಲ್ಲಿಯೇ ಏನೇನೋ ಯೋಜನೆಗಳು ಹೀಗೆ ಮಾಡಿದ್ರೆ ಹೇಗೆ, ಹಾಗೆ  ಮಾಡಿದ್ರೆ ಹೇಗೆ, ಅಲ್ಲಿ ಹೋಗೋಣ,ಇಲ್ಲಿ ಹೋಗೋಣ ಅಂತ. ಇವೆಲ್ಲದರ ಯೋಚನೆ ಮಾಡ್ತಿರೋವಾಗಲೇ  ಥಟ್ಟನೆ ನನ್ನ ತಲೆಯೊಳಗೊಂದು ಯೋಚನಾ ಲಹರಿ  ಬಂದು ಹೋಯಿತು, ನಾವೆಲ್ಲಾ ಚಿಕ್ಕವರಿದ್ದಾಗ  ಹೇಗಿತ್ತು ಈ  ಹೊಸ ವರ್ಷದ ಆಚರಣೆ ಎಂಬ ಪ್ರಶ್ನೆ ನನ್ನೊಳಗೆ ಮೂಡಿ ಬಂತು. ನೀವುಗಳು ಸಹ ಒಮ್ಮೆ ಆ ನೆನಪಿನಾಳಕ್ಕೆ  ಹೋಗಿಬನ್ನಿ. ಎಲ್ಲೋ ಪುಸ್ತಕದ ಪೇಜುಗಳ ಮಧ್ಯೆ ಅಡಗಿಸಿ ಇಟ್ಟ  ಒಂದು , ಎರಡು ಅಥವಾ ಐದು ರೂಪಾಯಿ ನೋಟುಗಳನ್ನು, ಟ್ರಂಕಿನ ಅಡಿಯಲ್ಲಿ  ಬಚ್ಚಿಟ್ಟ ಚಿಲ್ಲರೆ ಕಾಸನ್ನು ಒಟ್ಟುಗೂಡಿಸಿ  ಗ್ರೀಟಿಂಗ್ ಕಾರ್ಡು ತರಬೇಕಿತ್ತು. ಶಂಕರ್‌ನಾಗ್, ರಾಜ್ಕುಮಾರ, ಅಂಬರೀಶ್, ಪ್ರಭಾಕರ್  , ರವಿಚಂದ್ರನ್  ಪೋಟೋಗಳನ್ನೊಳಗೊಂಡ ಎಂಟಾಣೆಯ  ಗ್ರೀಟಿಂಗ್ ಕಾರ್ಡು, ಅದರ ಹಿಂಬದಿಯಲ್ಲಿ   "ಕರುವಿಗೆ ಹಸು ಇಷ್ಟ, ಹೂವಿಗೆ   ದುಂಬಿಗೆ   ಇಷ್ಟ, ಆಕಾಶಕ್ಕೆ ಸೂರ್ಯ ಇಷ್ಟ, ರಾತ್ರಿಲಿ  ಚಂದ್ರ ಇಷ್ಟ , ನನಗೆ  ನೀ ಇಷ್ಟ  ನಿನಗೆ ನಾ ಇಷ್ಟ"  ಎಂದು  ಎಂದು ಬರೆದು, ಮನೆಯಲ್ಲಿ  ಸಿಗೋ ಹಳೇ ಲಗ್ನಪತ್ರಿಕೆ ಕ

ನಮ್ಮ ಹಬ್ಬಗಳು ಮತ್ತು ನಾವು

ಬಾ ಮಳೆಯೇ ಬಾ ಇನ್ನು ಬಿರುಸಾಗಿ ಬಾ ಜನರಾರು ಹೊರಗೆ ಬಾರದಂತೆ ಜಿಡಿಜಿಡಿಯಾಗಿ ಬಾ ಬೀದಿಗೆ ಬಂದು ಪಟಾಕಿ ಹೊಡೆಯದಂತೆ ....!! ಈ ದೀಪಾವಳಿ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಮೂರುದಿನಗಳ ಸತತ ಜಿಡಿ ಮಳೆ , ಬಹಳಷ್ಟು ಜನಕ್ಕೆ ಈ ಮಳೆಯಿಂದಾಗಿ ಬೇಸರ , ಸಿಡಿಮಿಡಿ ಆಗಿರಬಹುದು . ಮಳೆಯಲ್ಲಿ ತೋಯ್ದು ಬಂದರೂ ಸಹ ಈ ಮೂರುದಿನಗಳಲ್ಲಿ ಮಳೆ ಬಂದಿದ್ದಕ್ಕೆ ನನಗೆ ವೈಯುಕ್ತಿಕವಾಗಿ ಬಹಳ ಖುಷಿಯಾಯಿತು . ಈ ಮೆಟ್ರೋ ನಗರಗಳ ಜೀವನದಲ್ಲಿ ನಮ್ಮ ಹಬ್ಬಗಳ ಆಚರಣೆಯ ಶೈಲಿಯೇ ಬದಲಾಗಿ ಹೋಗಿದೆ . ನಮ್ಮ ಹಿರಿಯರು ಆ ಹಬ್ಬಗಳಿಗೆ ನೀಡುತ್ತಿದ್ದ ಮಹತ್ವ ಹಾಗು ಆ ಹಬ್ಬಗಳ ಆಚರಣೆಯ ಹಿಂದೆ ಇದ್ದ ವೈಜ್ಞಾನಿಕ ಕಾರಣಗಳನ್ನು ಮರೆತಿದ್ದೇವೆ . ಬೆಂಗಳೂರಿನಂತಹ ಮಹಾನಗರಗಳಲ್ಲಿ ಪ್ರತಿ ಹಬ್ಬದ ಸನ್ನಿವೇಶದಲ್ಲೂ ನಾವು ನೋಡುವ ಸನ್ನಿವೇಶಗಳು ಈ ಹಬ್ಬಗಳ ಬಗ್ಗೆ ಬೇಸರ & ವಾಕರಿಕೆ ಮೂಡಿಸುತ್ತವೆ . ಗಣೇಶ ಹಬ್ಬ ಮುಗಿದ ಮೇಲೆ ಯಾವ ಕೆರೆ ಕಟ್ಟೆಗಳಲ್ಲಿ ನೋಡಿದರೂ ವಿಘ್ನ ಭಗ್ನವಾಗಿ ಅನಾಥವಾಗಿ ಬಿದ್ದಿರುವ ಗಣಪ ವಿಗ್ರಹಗಳಿಗೆ ಬರವಿಲ್ಲ , ಈ ವಿಗ್ರಹಗಳಿನ ಬಣ್ಣದ ರಾಸಾಯನಿಕಗಳಿಗೆ ಬಲಿಯಾಗುವ ಅದೆಷ್ಟೋ ಜಲಚರಗಳಿಗೆ ಲೆಕ್ಕವಿಲ್ಲ . ದಸರಾ ಮುಗಿಯುತ್ತಿದ್ದಂತೆ ಬೀದಿ ಬೀದಿಗಳಲ್ಲಿ ಸಂಗ್ರಹವಾಗುವ ತ್ಯಾಜ್ಯವಿಲೇವಾರಿಯ ಕಷ್ಟ ಪಾಪ ಆ ಅಮಾಯಕ ಕಸ ಸಂಗ್ರಹಿಸುವವರಿಗೆ ಮಾತ್ರವೇ ಗೊತ್ತು , ದುರ್ವಾಸನೆ ಅಂತ ಮೂ

ಎಲ್ಲ ಕನ್ನಡ ಮನಸ್ಸುಗಳಿಗೂ ಕನ್ನಡ ರಾಜ್ಯೋತ್ಸವ ಶುಭಾಶಯಗಳು

ಇಮೇಜ್

ಹೆತ್ತವಳು...

ಪುಟ್ಟ ಕಂದನ ಮೊದಲ ತೊದಲು ನುಡಿಯೇ ಅಮ್ಮ . ಬಾಯಲ್ಲಿ ಜೊಲ್ಲು ಸುರಿಸುತ್ತಾ ತೊದಲು ನುಡಿಯಲ್ಲಿ ಅಮ್ಮಾ ಎಂದರೆ ಸಾಕು , ಆ ತಾಯಿಯ ಮುಖದಲ್ಲಿನ ಆನಂದಕ್ಕೆ ಸಾಟಿಯೇ ಇರುವುದಿಲ್ಲ . ಹೆಣ್ಣಿಗೆ ತಾಯಿ ಎಂಬ ಪಟ್ಟ ಬಂದೊಡನೆಯೇ ಅವಳ ಜೀವನದ ಸರ್ವಸ್ವವೂ ಸ್ವಾರ್ಥತರಹಿತವಾಗಿಬಿಡುತ್ತದೆ . ಇದು ಅವಳಿಗೆ ಆ ದೇವರು ಕೊಟ್ಟ ವರವೋ ಶಾಪವೋ ತಿಳಿಯದು . ತಾಯಿ ಎನಿಸಿಕೊಂಡವಳು ಎಂದಿಗೂ ತನಗೆ ಮಾತ್ರ ಇರಲಿ ಎಂಬುದಾಗಿ ಯೋಚಿಸುವುದಿಲ್ಲ , ಅವಳ ಎಲ್ಲಾ ಯೋಚನೆಗಳಲ್ಲಿಯೂ ತನಗೆ ಮಾತ್ರ ಎಂಬುದಕ್ಕಿಂತ ತನ್ನ ಮಕ್ಕಳಿಗೆ ಎಂಬ ಯೋಚನೆ ಇದ್ದೇ ಇರುತ್ತದೆ . ಈ ಭೂಮಿಗೆ ಬಂದು ಕಣ್ಣು ಬಿಟ್ಟ ಪ್ರತಿಯೊಂದು ಶಿಶುವಿನ ಬಾಯಿಂದ ಮೊದಲು ಬರುವ ಪದವೇ ಅಮ್ಮ .. ಅಳುವಿನಲ್ಲೂ ಮಗು ತನ್ನ ತಾಯಿಯನ್ನು ಅಕ್ಕರೆಯಿಂದ ಅಮ್ಮ ... ಎಂದು ಕರೆಯುತ್ತದೆ . ಅಮ್ಮ ಎಂಬುದು ಕೇವಲ ಎರಡೂವರೆ ಅಕ್ಷರಗಳ ಒಂದು ಪದ ಅಷ್ಟೆ ಆದರೆ ಆ ಪದದ ಒಳಗಿನ ಭಾವನೆಗಳು ಮಾತ್ರ ಸಾವಿರ ಸಾವಿರ . ಭಾಷೆ ಯಾವುದೇ ಆಗಿರಲಿ ಅಮ್ಮ ಎಂಬುದು ಹೃದಯದಿಂದ ಮಧುರವಾಗಿ ಮಾರ್ದನಿಸುವ ಶಬ್ದ . ನಮ್ಮ ನಡುವೆ ಹುಡುಕಿದರೆ ಕೋಟ್ಯನುಕೋಟಿ ಕೆಟ್ಟ ಮಕ್ಕಳು ದೊರಕುತ್ತಾರೆ . ಆದರೆ , ಕೆಟ್ಟ ತಾಯಿ ಎನಿಸಿಕೊಂಡವರು ಮಾತ್ರ ವಿರಳಾತಿವಿರಳ . ತಾಯಿ ಮಮಕಾರ , ಸಹನೆಯ ಸಾಕಾರ ಮೂರ್ತಿ . ತಾಯಿಯ ಹೃದಯ ಬಹು ಮೃದು ಆದರೆ ಮಕ್ಕಳ ವಿಷಯಕ್ಕೆ ಬಂದಾಗ ಮನಸ್ಸು ಮಾತ್ರ ಬಹಳ ಗಟ್ಟಿ , ಏನೇ ಆದರೂ ತನ್ನ ಮಕ್ಕಳನ್ನು ಬಿಟ್ಟುಕೊಡದ ಛಲ