ಪೋಸ್ಟ್‌ಗಳು

2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಜೀವನ .........

ಕಾಣುತ್ತಲೇ ಇದ್ದೇವೆ  ಜೀವನದ ಕನಸು ಆದರೆ ಮಾಡಿಕೊಳ್ಳಲಾಗು ತ್ತಿಲ್ಲ ನನಸಾಗಿಸಿಕೊಳ್ಳುವ ಮನಸ್ಸು ಎಲ್ಲಿದ್ದೆವು ನಾವು ಎಲ್ಲಿರಬೇಕಿತ್ತು ನಾವು ಎಲ್ಲಿರು ವೆವು ಈದಿನ ಏಳು ಬೀಳಿನ ನಡುವೆ ಗೊತ್ತು ಗುರಿಯಿಲ್ಲದೆಡೆಗೆ ಸಾಗುತ್ತಿದೆ ಈ ಜೀವನ ನಾವಾರು ಬಯಸಿರಲಿಲ್ಲಾ ಈ ಜೀವನ ಬಯಸದೇ ಬರು ವ ನೋವಿಗೆ ಜೀವನದಲ್ಲಿ ನೂ ರಾರು ಕಾರಣ ರೇಷ್ಮೆ ಹುಳು ತನ್ನ ಸಾವಿನ ಬಲೆ ತಾನೇ ಹೆಣೆವಂತೆ ನಮ್ಮ ನಮ್ಮ ಜೀವನದ ನೋವಿಗೆ ನಾನೇ ಹೊಣೆಯಂತೆ… ನಮ್ಮೊಳಗೆ ನಾವಾಗಬೇಕು ಪ್ರವೇಶ ಹೊರಬರಬೇಕಿದೆ ನಮ್ಮೊಳಗಿನ ವಿಶೇಷ ತೊಟ್ಟು ಕೊಂಡು ಹೊರಡಬೇಕಿದೆ ಗೆದ್ದವರ ವೇಷ ಉಳಿಸಿಕೊಳ್ಳೋದು ಬೇಡ ಸೋಲಿನ ಅವಶೇಷ                                                      :- ಕನ್ನಡವೆಂಕಿ

ಅಂದು ಇಂದು

ಚಡ್ಡಿ ಹರಿದಿದ್ದರೂ ಅಂದು ಮಾನಕ್ಕೆ ಅಂಜಿರಲಿಲ್ಲ ಇಸ್ತ್ರಿ ಇಲ್ಲದಅಂಗಿಯಲ್ಲಿಂದು ಹೊರಹೋಗಲು ಮನಸ್ಸಾಗುವುದಿಲ್ಲ ದವಡೆಯೊಳಗಿನ ಜೊಲ್ಲು, ಮೂಗಿನ ಗೊಣ್ಣೆ ಆಗಾಗ ನಾಲಿಗೆಗೆ ರುಚಿಸುತ್ತಿದ್ದವಲ್ಲ ಈಗಿನ ಫಿಜ್ಜಾ, ರೋಟಿ, ಪಾಪ್ ಕಾರ್ನ್ .. ಎಲ್ಲಿಯೂ ಆ ರುಚಿಯಿಲ್ಲ.. ಸೈಕಲ್ ಟೈರಿನ ಓಟದ ವೇಗದ ಮುಂದೆ ಇಂದಿನ ಕಾರು ಬೈಕುಗಳ ವೇಗ ಮಜನೀಡುತ್ತಿಲ್ಲ ಮಂಡಿಯ ಗಾಯಕ್ಕೆ ಬೀದಿಯ ಮಣ್ಣೆ ಮದ್ದಾಗಿತ್ತು ಅಂದು ವಾಸಿಯಾಗದು ಇಂದಿನ ಗಾಯಗಳು ದುಬಾರಿ ಔಷದಿ ಇಲ್ಲದೆ ಇಂದು ಸಿನಿಮಾ ಪೋಸ್ಟರ್ ವುಳ್ಳ ಐಸ್ ಕ್ಯಾಂಡಿ ಸೈ ಕಲ್ ಕಂಡೊಡನೆ ಬಾಯಲ್ಲಿ ನೀರೂರಿಸುತ್ತಿತ್ತು ಅಪ್ಪನಿಗೆ ತಿಳಿಯದಂತೆ ಅಟ್ಟದ ಮೇಲಿನ ಹಳೇ ಸಾಮಾನು ಕದ್ದು ಐಸ್ ಕ್ಯಾಂಡಿ ಚೀಪುವ ಮನಸ್ಸಾಗುತ್ತಿತ್ತು ಇಂದಿನ ಕಾಲದ ಐಸ್ ಕ್ರೀಮಲೆಲ್ಲಾ ಮತ್ತೋ ಮತ್ತು.... ತೆಂಗಿನ ಗರಿಯ ಆ ವಾಚು ಕನ್ನಡಕ ರಸ್ತೆಯ ಮೇಲಿನ ರೋಜಾ ಹೂವಿನ ರಂಗೋಲಿ ಮರೆತೇನೆಂದರು ಮರೆಯಲಾಗದು..... ಅಂದು ಅಂದೇ ಇಂದು ಇಂದೇ... ಮರಳಿ ಬರದು ಅಂದಿನ ಆ ಸಡಗರ ಸಂಭ್ರಮ. - ಕನ್ನಡವೆಂಕಿ

ಹೊಟ್ಟೆಗಾಗಿ ಬಟ್ಟೆಗಾಗಿ...

ಏನೆಲ್ಲಾ ಮಾಡಬೇಕಿದೆ ಹೊಟ್ಟೆಗಾಗಿ ನಿರಂತರ ಹೋರಾಟವಿದು ತುಂಡು ಬಟ್ಟೆಗಾಗಿ ಬೇರೊಬ್ಬರ ತುಳಿಯುವಿಕೆ ನಮ್ಮ ಬಾಳ್ವೆಗಾಗಿ ಇಂದಿನ ಹೋರಾಟ ನಮ್ಮ ನಾಳೆಗಾಗಿ ಬಂದಾಗ ನಾವಿಲ್ಲಿ ಬರಿ ಕೈ ಹೋಗುವಾಗ ಮಣ್ಣಲ್ಲಿ ಬರಿ ಮೈ ತಿಂದಿದ್ದ ಕರಗಿಸಲು ಉಳ್ಳವರ ಹೋರಾಟ ತುತ್ತು ಕೂಳಿಗಾಗಿ ಬಡವರ ಚೀರಾಟ ಎಂದು ಮುಗಿಯುವುದೋ ಈ ಗೋಳಾಟ.......

ಹೊಸ ವರ್ಷದ ಶುಭಾಷಯಗಳು

ತುಳಿಯಬೇಕಿದೆ ಇನ್ನೂ ಜೀವನದ ಸೈಕಲ್ಲು ಅದಕ್ಕಾಗಿಯೇ 2012 ರ ಪ್ರಳಯ ಕ್ಯಾನ್ಸಲ್ಲು ಕಳೆದುಹೋಯಿತು ಹಳೆಯ ವರ್ಷ ನೋವಲ್ಲೂ ನಲಿವಲ್ಲೂ ಹಳೆ ನೆನಪು ಹೊಸ ಭರವಸೆಯೊಡನೆ ಬದುಕೋಣ ಬನ್ನಿ 2013 ಈ ಹೊಸ ವರ್ಷದಲ್ಲೂ……….. ಹೊಸ ವರ್ಷದ ಶುಭಾಷಯಗಳು…..                                        :- ಕನ್ನಡವೆಂಕಿ