ಪೋಸ್ಟ್‌ಗಳು

ಏಪ್ರಿಲ್ 4, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನಾವೆಲ್ಲಿದ್ದೇವೆ... ಎಲ್ಲಿದ್ದಾರೆ ನಮ್ಮ ಹೆತ್ತವರು....??

ಯಾವುದೋ ಜನಜಂಗುಳಿಯಲ್ಲಿದ್ದರೂ ಸಹ ಏಕಾಂಗಿ ಅನಿಸಿದಾಗ, ಈ ಜಗತ್ತಿನಲ್ಲಿ ಯಾರು ನನ್ನನ್ನು ಅರ್ಥಾನೇ ಮಾಡಿಕೊಳ್ತಿಲ್ಲ ಅನಿಸಿದಾಗ, ನಮ್ಮ ಜೀವನವನ್ನೇ ನಾವು ದ್ವೇಷಿಸಿಕೊಳ್ಳುವಂತಾದಾಗ ಹಾಗೇ ಸುಮ್ಮನೇ ಕಣ್ಣುಮುಚ್ಚಿ  ಈ ಜಗತ್ತಿನಲ್ಲಿ   ನನ್ನನ್ನು ಅತಿ ಹೆಚ್ಚು ಪ್ರೀತಿಸೋ ವ್ಯಕ್ತಿಗಳು, ನನ್ನ ಕ್ಷೇಮ ಬಯಸೋರು ಮತ್ತು ನನಗಾಗಿಯೇ ಬದುಕಿದವರು  ಯಾರಾದ್ರು ಇದಾರಾ ಅಂತ ಒಂದು ಕ್ಷಣ ಯೋಚಿಸಿ. ಆಕ್ಷಣದಲ್ಲಿ ನಮ್ಮ ಕಣ್ಣಿಗೆ ಬರೋದು ನಮ್ಮ  ತಂದೆ ತಾಯಿ ವ್ಯಕ್ತಿತ್ವ ಮಾತ್ರ. "ಅಪ್ಪ ಸ್ಕೂಲ್  ಪೀಸು ಕಟ್ಟಬೇಕು, ಸ್ಕೂಲಿಂದ ಟ್ರಿಪ್ ಹೋಗ್ತಿದಾರೆ  ನಾನು ಹೋಗಬೇಕು "  ಅಂತ ದುಡ್ಡು ಕೇಳ್ತಾನೆ ಇರ್ತಿದ್ವಿ. 'ಎಷ್ಟೇ ಕೇಳಿದ್ರು ದುಡ್ಡು ಕೊಡಲ್ಲಾ, ಇವರಿಗೇಕೆ  ಅರ್ಥ ಆಗಲ್ಲಾ, ನಾವು ದಿನಾ ಸ್ಕೂಲಲ್ಲಿ ಬೈಸಿಕೊಳ್ಳೋದು ಇವರಿಗೆ ಇಷ್ಟಾನಾ" ಅಂತೆಲ್ಲಾ  ಜೊತೆಗಾರರೊಂದಿಗೆ  ಬೇಸರಿಸಿಕೊಳ್ತಿದ್ವಿ.  "ಈ ಟ್ರಿಪ್ ಎಲ್ಲಾ ಬೇಡ ಮಗಾ, ನಿನಗೆ  ಪ್ರಯಾಣ ಆಗಲ್ಲ, ನಮ್ಮ ಟೈಮ್ ಸರಿಯಿಲ್ಲ, ಮುಂದಿನ ವರ್ಷಕ್ಕೆ  ಹೋಗೋವಂತೆ ಬಿಡಪ್ಪಾ" ಅನ್ನೊ ಮಾತು  ಅಪ್ಪ ಅಮ್ಮನ ಕಡೆಯಿಂದ ಬರ್ತಿತ್ತು. ಆದರೆ ನನ್ನ ಮಗನೂ ಎಲ್ಲ ಮಕ್ಕಳ ಹಾಗೆ  ಸಂತೋಷವಾಗಿರಲಿ, ಟ್ರಿಪ್ ಹೋಗಲಿ ಅನ್ನೋ ಆಸೆ ಅಪ್ಪ ಅಮ್ಮನಿಗೂ ಇದೆ, ಆದರೆ ದುಡ್ಡು ಹೊಂದಿಸೋಕೆ ಆಗದೆ ಅಂತೆಲ್ಲಾ ಹೇಳ್ತಿದಾರೆ   ಅನ್ನೋ ಸತ್ಯ ನಮಗೆ ಆಗ ತಿಳಿಯುತ್ತಲೇ ಇರಲಿಲ್ಲ. ಸ್ಕೂಲ್ ಪೀಸು ಕಟ್ಟಬೇಕು