ಪೋಸ್ಟ್‌ಗಳು

ಮಾರ್ಚ್, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅಚ್ಚೇ ದಿನಾ ಅಂದ್ರೆ ಏನು ಶಿವಾ....?

ನಾವು ಇಸ್ಕೂಲ್‌ ಲಿ ಓದೋವಾಗ ನಮ್ಮ ಹಿಂದಿ ಮೇಷ್ಟ್ರು "ಅಚ್ಚೇ ದಿನ್‌" ಅಂದ್ರೆ ಒಳ್ಳೆಯ ದಿನಗಳು ಅಂತ ಹೇಳಿಕೊಟ್ಟಿದ್ರು.ನಾವು ಅದನ್ನೇ ಕಲ್ತ್ಕೊಂಡು ಒಳ್ಳೆ ದಿನಗಳು ಬರ್ತವೆ ಅಂತಕಾಯ್ತಿದ್ವಿ ಆದ್ರೆ ಈಗ ನೋಡುದ್ರೆ ಅಚ್ಚೇ ದಿನ ಅನ್ನೋದಕ್ಕೆ ಅರ್ಥಾನೆ ಬದಲಾಗಿ ಹೋಗಿದೆ ! ಅಚ್ಚೇದಿನ ಅಂದ್ರೆ "ದುಬಾರಿ ದಿನ" ಅಂತ ಅರ್ಥ ಮಾಡ್ಕೋಬೇಕಿದೆ. ಹೆಂಗೆ ಅಂತೀರಾ ಇಲ್ಲೋಡಿ, ಎರಡು ವರ್ಷದ ಹಿಂದೆ ಒಬ್ಬ ನಾ ಅಚ್ಚೇ ದಿನಗಳನ್ನು ತರ್ತೀನಿ ಅಂತ ಬೊಂಬಡ ಹೊಡ್ಕೊಂಡು ಬಂದ. ನಾವುಗಳು ಸಹ ಇನ್ಮೇಕೆ ಒಳ್ಳೇ ದಿನಗಳು ಬರ್ಬೋದು ಶಿವಾ ಅಂತ ಕಣ್ಣು ಕಿವಿ ಬುಟ್ಕೊಂಡು ಕಾಯ್ತಾ ಕುಂತಿದ್ವಿ. ಅಚ್ಚೇ ದಿನಗಳು ಇನ್ನೇನು ಬರಬಹುದು, ಈಗ ಬರಬಹುದು, ಆಗ ಬರಬಹುದು ಅಂತ ಕಾಯ್ತಾ ಕುಂತಿರೋವಾಗಲೇ ಕತ್ತು ಎತ್ತಿ ನೋಡುದ್ರೆ ಈ ಅಸಾಮಿ ದೇಶ ಸುತ್ತೋಕೆ ನಮ್ಮ ತಲೇ ಮೇಲೆ ಇಮಾನ ಬುಟ್ಕೊಂಡು ಹೊಂಟುಬುಡೋದಾ.. ಹೋಗ್ಲಿ ದೇಶಗಳನ್ನೆಲ್ಲಾ ಸುತ್ಕೊಂಡು ನಮ್ಮ ದೇಶಕ್ಕೆ ಒಳ್ಳೆದಾಗೋ ಹಾಗೇ ಏನೋ ಮಾಡ್ಕೊಂಡು ಬರಲಿ ಅಂತ ಕಾಯೋರು ನಾವು ಕಾಯ್ತಾನೆ ಕುಂತಿದ್ವಿ. ದೇಶಕ್ಕೆ ವಾಪಸ್ಸು ಬರೋವಾಗ ಈವಪ್ಪಾ ತರೋ ಕಪ್ಪು ಹಣದಲ್ಲಿ ನಮಗೂ ಒಂದಿಷ್ಟು ಪಾಲು ಬತ್ತದೇ ಅಂತ ಮಡಕೆ ಒಳಗೆ ಮಡಿಚಿ ಇಟ್ಟಿದ್ದ ದುಡ್ಡನ್ನೆಲ್ಲಾ ತೆಗೆದು ಆಧಾರ್ ಕಾರ್ಡು, ಹಸ್ರು ಕಾರ್ಡು ತಗೋಂಡು ಬ್ಯಾಂಕ್‌ ಗೆ ಹೋಗಿ ನಮ್ಮದೂ ಒಂದು ಅಕೌಂಟ್‌ ಮಾಡ್ಸಿ ಪಾಸ್‌ಬುಕ್ ತಂದು ಅದೇ ಮಡಕೆ ಒಳಗೆ ಬಚ್ಚಿಟ್ವಿ. ಅಕೌಂಟ