ಅಂದು ಇಂದು

ಚಡ್ಡಿ ಹರಿದಿದ್ದರೂ ಅಂದು ಮಾನಕ್ಕೆ ಅಂಜಿರಲಿಲ್ಲ
ಇಸ್ತ್ರಿ ಇಲ್ಲದಅಂಗಿಯಲ್ಲಿಂದು ಹೊರಹೋಗಲು ಮನಸ್ಸಾಗುವುದಿಲ್ಲ
ದವಡೆಯೊಳಗಿನ ಜೊಲ್ಲು, ಮೂಗಿನ ಗೊಣ್ಣೆ
ಆಗಾಗ ನಾಲಿಗೆಗೆ ರುಚಿಸುತ್ತಿದ್ದವಲ್ಲ
ಈಗಿನ ಫಿಜ್ಜಾ, ರೋಟಿ, ಪಾಪ್ ಕಾರ್ನ್ .. ಎಲ್ಲಿಯೂ ಆ ರುಚಿಯಿಲ್ಲ..
ಸೈಕಲ್ ಟೈರಿನ ಓಟದ ವೇಗದ ಮುಂದೆ
ಇಂದಿನ ಕಾರು ಬೈಕುಗಳ ವೇಗ ಮಜನೀಡುತ್ತಿಲ್ಲ
ಮಂಡಿಯ ಗಾಯಕ್ಕೆ ಬೀದಿಯ ಮಣ್ಣೆ ಮದ್ದಾಗಿತ್ತು ಅಂದು
ವಾಸಿಯಾಗದು ಇಂದಿನ ಗಾಯಗಳು ದುಬಾರಿ ಔಷದಿ ಇಲ್ಲದೆ ಇಂದು
ಸಿನಿಮಾ ಪೋಸ್ಟರ್ ವುಳ್ಳ ಐಸ್ ಕ್ಯಾಂಡಿ ಸೈಕಲ್
ಕಂಡೊಡನೆ ಬಾಯಲ್ಲಿ ನೀರೂರಿಸುತ್ತಿತ್ತು
ಅಪ್ಪನಿಗೆ ತಿಳಿಯದಂತೆ ಅಟ್ಟದ ಮೇಲಿನ ಹಳೇ ಸಾಮಾನು
ಕದ್ದು ಐಸ್ ಕ್ಯಾಂಡಿ ಚೀಪುವ ಮನಸ್ಸಾಗುತ್ತಿತ್ತು
ಇಂದಿನ ಕಾಲದ ಐಸ್ ಕ್ರೀಮಲೆಲ್ಲಾ ಮತ್ತೋ ಮತ್ತು....
ತೆಂಗಿನ ಗರಿಯ ಆ ವಾಚು ಕನ್ನಡಕ
ರಸ್ತೆಯ ಮೇಲಿನ ರೋಜಾ ಹೂವಿನ ರಂಗೋಲಿ
ಮರೆತೇನೆಂದರು ಮರೆಯಲಾಗದು.....
ಅಂದು ಅಂದೇ ಇಂದು ಇಂದೇ...
ಮರಳಿ ಬರದು ಅಂದಿನ ಆ ಸಡಗರ ಸಂಭ್ರಮ.

- ಕನ್ನಡವೆಂಕಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಂಡಿತ್‌ ನೆಹರು ಪ್ರೌಢಶಾಲೆ ಗುರುವಂದನಾ ಕಾರ್ಯಕ್ರಮದ ನೆನಪು

ನನ್ನವಳು ನನ್ನೊಲವಿನ ಬೆಳಕಿವಳು..!

ವಿದ್ಯಾಗಮ‌ ಕಾರ್ಯಕ್ರಮ ಸ್ಥಗಿತದ ಹಿಂದಿನ ಕಾರಣಗಳು