ವಿದ್ಯಾಗಮ‌ ಕಾರ್ಯಕ್ರಮ ಸ್ಥಗಿತದ ಹಿಂದಿನ ಕಾರಣಗಳು


ವಿದ್ಯಾಗಮ ಕಾರ್ಯಕ್ರಮ ನಿಲ್ಲಲು ಕಾರಣಗಳು ಹಾಗು ಅದರ ಹಿಂದಿರುವ ಕೈಗಳು ಯಾವುವು ಗೊತ್ತಾ... ಮುಂಬರುವ ಎಂ.ಎಲ್.ಸಿ ಎಲೆಕ್ಷನ್ ಲಿ‌ ಕ್ಯಾಂಪೇನ್ ಮಾಡೋಕೆ‌ ಶಿಕ್ಷಕರು ಬೇಕಿತ್ತು, ಒಳ್ಳೆ ಕಾರ್ಯಕ್ರಮದಿಂದ ಸರ್ಕಾರಿ ಶಾಲೆಗಳ ದಾಖಲಾತಿ‌ ಹೆಚ್ಚಾಗ್ತ ಇದ್ದಿದ್ದು ನೋಡಿ ಖಾಸಗಿಯವರಿಗೆ ದಿಗಿಲಾಗಿತ್ತು, ಪ್ರಾಮಾಣಿಕವಾಗಿ‌ ಬಡ ಮಕ್ಕಳೊಡನೆ‌ ಬೆರೆತು ಕೆಲಸ ಮಾಡ್ತಿದ್ದ ಶಿಕ್ಷಕರನ್ನು ನೋಡಿ  ಕೆಲವು ಸೋಮಾರಿ/ಅಪ್ರಮಾಣಿಕ ಶಿಕ್ಷಕರಿಗೆ ಇದನ್ನು ಹೇಗಾದರೂ ಮಾಡಿ ನಿಲ್ಲಿಸಬೇಕು ಎಂಬ ದುರಾಸೆ ಮೂಡಿತ್ತು ಇವರೆಲ್ಲಾರಿಗೂ ಕಂಡಿದ್ದು ಒಂದೇ ಕಾರಣ ಅದು "ಕರೋನಾ".

ಇವರೆಲ್ಲಾ ಸೇರಿ‌ ಲಜ್ಜೆಗೆಟ್ಟ ಮಾಧ್ಯಮಗಳಿಗೆ ಫಂಡ್ ಮಾಡಿದ್ವು, ಸಂಜನಾ, ಕಂಗನಾ, ರಾಗಿಣಿ‌ ಹಿಂದೆ‌ ಬಿದ್ದಿದ್ದ ಇವರಿಗೆ ಆಗೆಲ್ಲಾ ಈ ವಿದ್ಯಾಗಮ‌ ಕಾಣಲೇ ಇರಲಿಲ್ಲ.
 ವಿದ್ಯಾಗಮ ಕಾರ್ಯಕ್ರಮದ ಆಳ ಅಗಲ‌ದ‌ ಅರಿವೇ ಇಲ್ಲದ ಈ ಮಾನಗೆಟ್ಟ ಮಾದ್ಯಮಗಳು ಅದನ್ನೇ ದೊಡ್ಡದಾಗಿ ತೋರಿಸಿ‌ ಇಡೀ ಕಾರ್ಯಕ್ರಮವನ್ನೇ ನಿಲ್ಲಿಸಿದರು. ಬಡ ಮಕ್ಕಳಿಗೆ‌ ಮನೆಬಾಗಿಲಲ್ಲಿ ಸಿಗುತ್ತಿದ್ದ ಶಿಕ್ಷಣಕ್ಕೆ ಕಲ್ಲು ಹಾಕಿ ಅದು ನಮ್ಮಿಂದಲೇ ಅಂತ‌‌‌ ನಾಚಿಕೆ ಬಿಟ್ಟ‌ ಅಷ್ಟೂ ಮಾದ್ಯಮಗಳು ಪ್ರಚಾರ ಪಡೆದುಕೊಂಡವು‌.
ವಿದ್ಯಾಗಮ‌ ಕಾರ್ಯಕ್ರಮ ನಿಲ್ಲೋದರಿಂದ ಶಿಕ್ಷಕರಿಗಾಗಲಿ, ರಾಜಕಾರಣಿಗಳಿಗಾಗಲಿ, ಮಾನಗೆಟ್ಟ ಮಾಧ್ಯಮಗಳ ‌ಪ್ರತಿನಿಧಿಗಳಿಗಾಗಲಿ‌ ಯಾವುದೇ ನಷ್ಟವಿಲ್ಲ. ಯಾಕೆಂದ್ರೆ ಅವರ ಮಕ್ಳಳೆಲ್ಲಾ ಖಾಸಗಿ ಶಾಲೆಗಳಲ್ಲಿ ಸರ್ಕಾರದ‌ ಕೃಪಾಕಟಾಕ್ಷದಲ್ಲೇ ನಡೆಯುತ್ತಿರುವ ಆನ್ಲೈನ್ ಶಿಕ್ಷಣ‌ ಪಡೆಯುತ್ತಿದ್ದಾರೆ.
ಮೇಷ್ಟ್ರು ಮನೆ ಹತ್ತಿರ ಬರ್ತಾರೆ ಅನ್ನೋ‌‌ ಭಯದಿಂದ  ಎಲ್ಲೂ ಹೊಗದೇ ಸುರಕ್ಷಿತವಾಗಿ ಪಾಠದಲ್ಲಿ ಭಾಗವಹಿಸುತ್ತಿದ್ದ ಈ ಮಕ್ಕಳ‌‌ ಈಗ ಬಾಲ ಕಾರ್ಮಿಕರಾಗಿ, ಹಲವು ಚಟುವಟಿಕೆಗಳಲ್ಲಿ‌ ಭಾಗಿಯಾಗಿ,‌ ಎಲ್ಲೆಲ್ಲೋ ತಿರುಗಾಡಿ ಆರೋಗ್ಯ ಕೆಡಿಸಿಕೊಂಡು ಸತ್ತರೆ ಅದು ಅವರ ಕರ್ಮ, ಯಾಕೆಂದರೆ‌ ಅವರು ಬಡವರ‌ ಮಕ್ಕಳು, ಮೇಲಾಗಿ‌ ಅವರಿಗೆ ಮತದಾನದ ಹಕ್ಕಿಲ್ಲ..!
ವಿದ್ಯಾಗಮ‌ ಕಾರ್ಯಕ್ರಮದಿಂದಾಗಿ‌ಕರೋನಾ ಹರಡುತ್ತಿದೆ‌ ಎನ್ನುವುದಾದರೆ, ಶಾಲೆಯಿಲ್ಲದ ಕಾರಣಕ್ಕೆ‌ ಮಕ್ಕಳು ಎಲ್ಲೆಲ್ಲೋ ಹೋಗಿ ಕಾಯಿಲೆ ಹಬ್ಬಿಸಿಕೊಳ್ಳುವುದಿಲ್ಲ ಅನ್ನಬಹುದೇ, ಸರ್ಕಾರ ಇದನ್ನು ತಡೆಯುವುದಾದರೆ, ಸರ್ಕಾರಿ‌ಕಛೇರಿಗಳು, ಬ್ಯಾಂಕುಗಳು, ಖಾಸಗಿ ಕಛೇರಿಗಳು,‌ಸಾವಿರಾರು ಜನ ಓಡಾಡೋ ಸಾರ್ವಜನಿಕ‌ ಸಾರಿಗೆಗಳು, ಬೆಂಗಳೂರಿನ‌ ಜನನಿಬಿಡ ಪ್ರದೇಶಗಳು ಹಾಗು ಆ ಪ್ರದೇಶದ ಅಂಗಡಿಗಳನ್ನು ಮುಚ್ಚಬೇಕಲ್ಲವಾ..
ಸರ್ಕಾರ ತಾತ್ಕಾಲಿಕವಾಗಿ ನಿಲ್ಲಿಸಿದೆ,  ಆಂತಿಮ‌ ನಿರ್ಧಾರ
ತಗೆದುಕೊಳ್ಳುವ ಮೊದಲು ಸೂಕ್ತವಾಗಿ ವಿಶ್ಲೇಷಣೆ ಮಾಡಬೇಕಿದೆ.
ಈಗಾಗಲೇ‌ ಸೋಂಕಿತರಾಗಿರುವ ಅಥವಾ ಕರೋನಾ‌ ಇಂದ‌‌ ಸತ್ತ ಶಿಕ್ಷಕರಲ್ಲಿ‌ಎಷ್ಟು ಜನಕ್ಕೆ ನಿಜಾವಾಗಿಯೂ ಈ ಕಾರ್ಯಕ್ರಮದಿಂದಾಗಿಯೇ ಸೋಂಕು ಬಂತು ಎಂಬುದರ ಬಗ್ಗೆ ವಿಚಾರಣೆಯಾಗಬೇಕು.
ಕರೋನಾ‌ ಮಹಾಮಾರಿ‌ ನಡುವೆ ಹೇಗೆ ಕಾರ್ಯಕ್ರಮ ನಡೆಸಬಹುದು ಎಂಬುದನ್ನು ಯೋಚಿಸಬೇಕೆ ಹೊರತು ಇಡೀ ಕಾರ್ಯಕ್ರಮವನ್ನೇ ರದ್ದು ಮಾಡುವುದು ಅವಿವೇಕತನ. ರಾಜಕೀಯ ಮೆರವಣಿಗೆಗಳು, ಸಭೆ ಸಮಾರಂಭಗಳು, ಚುನಾವಣೆಗಳನ್ನು ನಡೆಸಬಹುದಾದರೆ ಈ ಬಡ‌ಮಕ್ಕಳ‌ ಕಾರ್ಯಕ್ರಮವನ್ನೇಕೆ ನಡೆಸಬಾರದು.
ಆನ್ಲೈನ್ ಕಾರ್ಯಕ್ರಮ ರದ್ದುಗೊಳಿಸಿದ‌ ತಕ್ಷಣ ಎಲ್ಲಾ‌ಕಡೆಯೂ ಪೋಷಕರ‌‌ ಚರ್ಚೆ, ವಿರೋಧಗಳು ಕೇಳಿಬಂದವು, ಯಾಕೆಂದರೆ‌ ಅವರೆಲ್ಲಾ ವಿದ್ಯಾವಂತ ಪೋಷಕರು ಹಾಗು ಅವರಿಗೆ  ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಯೋಚನೆಯಿದೆ.
ಸರ್ಕಾರಿ ಶಾಲೆಯ ಮಕ್ಕಳ‌ ಕಾರ್ಯಕ್ರಮ‌ ರದ್ದಾದರೆ ಕೇಳವವರು ಯಾರು ?  ಕೇಳಬೇಕಾದ ಶಿಕ್ಷಕರೇ ಕೈ ಕಟ್ಟಿ ನಿಂತಿದ್ದಾರೆ.. ಹೀಗಿರುವಾಗ ಸರ್ಕಾರಿ ಶಾಲೆ‌ ಮಕ್ಕಳ ಭವಿಷ್ಯ ಏನಾಗಬಹುದು ಎಂಬುದನ್ನು ನಾವೆಲ್ಲ ಯೋಚಿಸಬೇಕಿದೆ.
ಸೂಕ್ತ ಜವಾಬ್ದಾರಿಯೊಂದಿಗೆ ವಿದ್ಯಾಗಮ ಕಾರ್ಯಕ್ರಮ ನಡೆಸುವ ಶಿಕ್ಷಕರಿಗೆ ಮಾತ್ರ‌ ಇಲಾಖೆಯ ವೇತನಸಹಿತ ಎಲ್ಲಾ ಸೌಲಭ್ಯ ಎಂದು ಶಿಕ್ಷಣ‌ ಇಲಾಖೆ‌ ಘೋಷಿಸಲಿ, ಆಗ ಪ್ರಾಮಾಣಿಕ‌ ಶಿಕ್ಷಕರು  ಈ ಸೌಲಭ್ಯಗಳಿಗೆ ಅಲ್ಲದಿದ್ದರೂ ತಮ್ಮ‌‌ಶಾಲೆಯ ಮಕ್ಕಳಿಗಾಗಿ ಖಂಡಿತ ಈ ಕಾರ್ಯಕ್ರಮ ನಡೆಸುತ್ತಾರೆ. ಕೈಲಾಗದವರು ಮನೆಯಲ್ಲಿಯೇ ಇರಲಿ, ಖಾಸಗಿ‌ ಶಿಕ್ಷಕರು ಮುಂದೆ ಬಂದಲ್ಲಿ‌ ಅವರಿಗೂ ಅವಕಾಶ ನೀಡಿ ಸೌಲಭ್ಯ ಒದಗಿಸಿ, ಇದರಿಂದ ಮಕ್ಕಳಿಗೂ ಹಾಗು ಆ  ಬಡ ಶಿಕ್ಷಕರಿಗೂ ಅನುಕೂಲವಾಗುತ್ತದೆ.
ಈ ಕಾರ್ಯಕ್ರಮ ನಡೆಸಲು ಒಪ್ಪದ ಶಿಕ್ಷಕರಿಗೆ ಸೌಲಭ್ಯ ಕಡಿತಗೊಳಿಸಿ, ಅದೇ ಸೌಲಭ್ಯಗಳನ್ನು ಅಂಗನವಾಡಿಯವರು, ಆಶಾ ಕಾರ್ಯಕರ್ತರು, ಸಮುದಾಯದ ವಿದ್ಯಾವಂತರಿಗೆ  ನೀಡಲಿ ಹಾಗು ಸೂಕ್ತ ಮುನ್ನೆಚ್ಚರಿಕೆಯೊಂದಿಗೆ ವಿದ್ಯಾಗಮ‌ ಕಾರ್ಯಕ್ರಮ‌ ನಡೆಸಲು ಅನುಮತಿ‌ನೀಡಿ.   ಆಗ ನೋಡಿ‌ ಈ ಕಾರ್ಯಕ್ರಮ ಎಷ್ಟು ಯಶಸ್ವಿಯಾಗುತ್ತದೆ ಎಂದು.

:ಕನ್ನಡವೆಂಕಿ, ರಾಮನಗರ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಂಡಿತ್‌ ನೆಹರು ಪ್ರೌಢಶಾಲೆ ಗುರುವಂದನಾ ಕಾರ್ಯಕ್ರಮದ ನೆನಪು

ನನ್ನವಳು ನನ್ನೊಲವಿನ ಬೆಳಕಿವಳು..!