ನನ್ನ ದೇವತೆ..... ನನ್ನವ್ವ

ದಾರಿಯಲಿ ಎಡವಿ
ಎದೆಗುಂದಿ ನಿಂತವನಿಗೆ
ಧೈರ್ಯ ತುಂಬಿ ಮುನ್ನೆಡೆಸಿದವಳು
ಗೆದ್ದು ಬೀಗುತ್ತಿದ್ದವರ ನಡುವೆಯೇ
ನನಗೂ ಗೆಲುವಿನ ಹುಚ್ಚು ಹಿಡಿಸಿದವಳು ನನ್ನವ್ವ

ಹಂಗಿಸಿದವರ ನಡುವೆ ಗೆದ್ದು ಬಂದಾಗ…
ಓಡಲೊಳಗಿನ ನೋವ ತೋರ್ಪಡದೆ
ತುಂಬಿಕೊಂಡ ಕಣ್ಣ ಮರೆಮಾಡಿ ನಕ್ಕವಳು
ನನ್ನ ಕಣ್ಣೊಳಗೆ ತನ್ನ ಕನಸಿನ ಬೀಜವ ಬಿತ್ತಿ
ಹರಿದ ಸೀರೆ ಸೆರಗಿನ ಅಂಚಲಿ ಕಣ್ಣೊರೆಸಿಕೊಂಡವಳು ನನ್ನವ್ವ

ತಾನು ಕಲಿತದ್ದು ಮೂರಕ್ಷರವಾದರೂ
ನನಗೆ ಕಲಿಸುವವರ ಮುಂದೆ ನಿಂತು
ನನ್ನ ಕಲಿಕೆಯ ಬಗ್ಗೆ ದಿಟ್ಟನುಡಿಗಳಾಡಿದವಳು
ನನ್ನೆದುರು ಕೋಪದಲಿ ನಟಿಸಿ
ನಾ ಮಾಡಿದ ತಪ್ಪಿಗೆ ಬಾಸುಂಡೆ ಬಾರಿಸಿ
ಮರೆಯಲಿ ತನ್ನನ್ನೇ ತಾನು ಹಂಗಿಸಿಕೊಂಡವಳು ನನ್ನವ್ವ

ಇಂದು ಅವಳ ಕನಸೆಲ್ಲಾ ಈಡೇರಿದಾಗ
ಜಗತ್ತನ್ನೇ ಗೆದ್ದವಳಂತೆ ಒಳಗೊಳಗೆ ಸಂಭ್ರಮಿಸಿದವಳು
ಜಗದ ಜನರೆಲ್ಲಾ ಬದಲಾದರೂ
ತಾನು ಮಾತ್ರ ಎಳ್ಳಷ್ಟು ಬದಲಾಗದೆ
ಇನ್ನಷ್ಟು ಕನಸುಗಳೊಡನೆ ನನ್ನೊಡನಿರುವಳು
ನನ್ನ ದೇವತೆ..... ನನ್ನವ್ವ
                                                  -ಕನ್ನಡವೆಂಕಿ


ಕಾಮೆಂಟ್‌ಗಳು

  1. ನಮಸ್ತೆ ವೆಂಕಟೇಶ್ ಸರ್, ನಾನು ನಿಮ್ಮ ಕವಿತೆಗಳನ್ನು ಓದಿದೆ. ತುಂಬಾ ಚೆನ್ನಾಗಿದೆ. ಅದರಲ್ಲಿ ಅಮ್ಮನ ಕವಿತೆ ತುಂಬಾ ಇಷ್ಡವಾಯಿತು. ನಾನು ಯಾರು ಅಂದರೆ ಮುರಳಿ ಡಿ ಗೌಡ, ಸ.ಶಿ. ಹೊಸಸಿದ್ದಾಪುರ. ಭದ್ರಾವತಿ. ( ಆಶಾಳ ಸಹೋದ್ಯೋಗಿ ).Ph No : 9916241938.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಂಡಿತ್‌ ನೆಹರು ಪ್ರೌಢಶಾಲೆ ಗುರುವಂದನಾ ಕಾರ್ಯಕ್ರಮದ ನೆನಪು

ನನ್ನವಳು ನನ್ನೊಲವಿನ ಬೆಳಕಿವಳು..!

ವಿದ್ಯಾಗಮ‌ ಕಾರ್ಯಕ್ರಮ ಸ್ಥಗಿತದ ಹಿಂದಿನ ಕಾರಣಗಳು