ಅವಳೊಡನಿದ್ದ ಆ ಕ್ಷಣ...


ಮುತ್ತಿಡುವಂತೆ ಒಂದೇ ಸಮನೆ ಸುರಿಯುತ್ತಿದ್ದ ಆ ಮಳೆಯಲ್ಲಿ
ತಣ್ಣನೆ ಬೀಸುತ್ತಿದ್ದ ತಂಗಾಳಿಯ ಚುಮು ಚುಮು ಚಳಿಯಲ್ಲಿ
ಸುತ್ತ ಮುತ್ತ ಯಾರು ಇರದ ಆ ದಾರಿಯಲ್ಲಿ
ಎಷ್ಟು ದೂರ ಸಾಗಿದರೂ ಮುಗಿಯದ ಆ ಪಯಣದಲ್ಲಿ
ಏನೇನೋ ಬಯಸುತ್ತಿದ್ದ ಆ ಕಂಗಳ ನೋಟದಲ್ಲಿ
ಆಹಾ ಎಂಥ ರೋಮಾಂಚನ , ಮಧುರ ಅಮರ ಅವಳೊಡನಿದ್ದ ಆ ಕ್ಷಣ...

ಅಂಗೈಯ ಬೊಗಸೆಯಲ್ಲಿ ಅವಳ ಮುಖವ ಹಿಡಿದು
ಬೆರಳುಗಳಲ್ಲಿ ಮುಂಗುರುಳೊಡನೆ ಆಟವಾಡುತ್ತಿರೆ
ಮರವನ್ನು ಬಾಚಿ ಹಬ್ಬಿದ ಬಳ್ಳಿಯಂತೆ ತಬ್ಬಿನಿಂತು
ನಾಚಿ ನೀರಾಗಿ ಮೊಗ್ಗಾದಳು ಅವಳು....

ನಾಚಿಕೆಯಲ್ಲಿ ಅದುರಿತ್ತಿದ್ದ ಅಧರಗಳಲ್ಲಿ
ಮಧುರ ಸಿಹಿ ಜೇನು ಸುರಿಯುತ್ತಿತ್ತು
ಜೇನು ಹೀರುವ ಕಾತರ ಅವನ ಕಣ್ಣಲ್ಲಿತ್ತು
ಸನಿಹ ಬಂದವನನ್ನು ತಡೆದ ಅವಳ ಧ್ವನಿ ಕಂಪಿಸುತ್ತಿತ್ತು
ಅವಳ ಕಣ್ನ ಕಮಲದ ಕನ್ನಡಿಯಲ್ಲಿ ಇವನದೇ ಬಿಂಬ ಕಾಣುತ್ತಿತ್ತು.
                                                      -ಕನ್ನಡವೆಂಕಿ

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಂಡಿತ್‌ ನೆಹರು ಪ್ರೌಢಶಾಲೆ ಗುರುವಂದನಾ ಕಾರ್ಯಕ್ರಮದ ನೆನಪು

ನನ್ನವಳು ನನ್ನೊಲವಿನ ಬೆಳಕಿವಳು..!

ವಿದ್ಯಾಗಮ‌ ಕಾರ್ಯಕ್ರಮ ಸ್ಥಗಿತದ ಹಿಂದಿನ ಕಾರಣಗಳು