ದೂರ ಸರಿದವರು


 
 ಅತ್ಮಿಯರೇ, ಸುಮಾರು ಎರಡು ವರ್ಷ ಒಂದು ಕುಟುಂಬವಾಗಿ ನನ್ನೊಡನಿದ್ದ ಸಿಲ್ಯಾಂಪ್ಸ್ ಸ್ನೇಹಿತರಿಗಾಗಿ ಈ ಅಕ್ಷರ ನಮನ.... 

ಅರಿವಿಲ್ಲದೆ ಹನಿ ಜಾರುತಿಹುದು
ದನಿಯಿಲ್ಲದೆ ಮನ ಬಿಕ್ಕಳಿಸುತಲಿಹುದು
ದೂರವಾಗುವ ದಿನ ಇಂದೇ ಏಕೆ ಬಂದಿಹುದು
ಅಲೆಮಾರಿ ಜೀವನದಲಿ ಊರ ಸೆಲೆ ತಂದವರು 
ಮತ್ತೆ ಭೇಟಿ ಯಾಗುವೆ ಎನ್ನುತ್ತಾ ಮತ್ತೆ ಇಂದು ದೂರ ಸರಿಯುತಿರುವರು,ಕಳೆದ ಎರಡು ವರುಷದ ಹಲವು ಹರುಷಕೆ ಕಾರಣರಾದವರು
ಇಂದು ಕಣ್ಣೊಳು ಕಂಬನಿ ಬಿರಿಯುತ್ತ ಹೊಸ್ತಿಲಲಿ ನಿಂತಿಹರು
ಒಳಗೆ ಮನ ಅಳುತ್ತಿದ್ದರು ಮುಗುಳ್ನಗೆ ಬೀರುತಾ ನಗುತ್ತಿರುವರು
ಎಲ್ಲೇ ಹೋದರು ಸಂತೋಷ ನಿಮ್ಮ ಪಾಲಿಗಿರಲಿ
ಪ್ರತಿ ಹೆಜ್ಜೆಗೂ ನಗೆ ಹೂವು ಅರಳುತ ಶುಭ ಕೋರಲಿ
ನನ್ನ ನೆನಪಿನ ಭುತ್ತಿಲಿ  ನಿಮ್ಮ ಪಾಲು ಎಂದೆಂದಿಗೂ ಇರಲಿ
                             -ವೆಂಕಟೇಶ್


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಂಡಿತ್‌ ನೆಹರು ಪ್ರೌಢಶಾಲೆ ಗುರುವಂದನಾ ಕಾರ್ಯಕ್ರಮದ ನೆನಪು

ನನ್ನವಳು ನನ್ನೊಲವಿನ ಬೆಳಕಿವಳು..!

ವಿದ್ಯಾಗಮ‌ ಕಾರ್ಯಕ್ರಮ ಸ್ಥಗಿತದ ಹಿಂದಿನ ಕಾರಣಗಳು