ಬೆಳದಿಂಗಳ ರಾತ್ರಿ


ಮಲಗಿದ್ದೆ ನಾ ಹುಣ್ಣಿಮೆಯ ಬೆಳದಿಂಗಳ ರಾತ್ರಿ
ನನಗಿತ್ತು ಚಲುವೆ ಕನಸಿನಲ್ಲಿ ಬರುವಳೆಂಬ ಖಾತ್ರಿ
ಕಣ್ಣು ಮುಚ್ಚದೇ ಅವಳಿಗಾಗಿ ಕಾದಿದ್ದೇ
ಕಣ್ಣು ಮುಚ್ಚಿದರೇ ತಾನೆ ಕನಸು ಎಂಬ
ಸತ್ಯ ತಿಳಿಯದೇ ಹೋದೆ….

ಬಳುಕುತ್ತಾ ಬಂದಳು ಚಲುವೆ ಬಳಿಯಲ್ಲಿ
ಅಂದೇಕೋ ಎಂದೂ ಕಾಣದ ಚೆಲುವು
ಅಂದು ಅವಳ ಕಣ್ಣಲ್ಲಿ
ಬೀರಿದಳೋಮ್ಮೆ ಮೈಮರೆಸುವ ಮೋಹಕ ನಗೆ
ಪದಗಳೇ ಇಲ್ಲ ವರ್ಣಿಸಲು ಆ ನಗೆಯ ಬಗೆ

ಕಾಡಿದಳು ನೋಡುತ್ತಾ ಕಣ್ಣಲ್ಲಿ ಕಣ್ಣಿಟ್ಟು
ಬೇಡಿದಳು ಪ್ರೀತಿಯ ಮನಸ್ಸಲ್ಲಿ ಮನಸಿಟ್ಟು
ಮನಸ್ಸು ಬಯಸಿತ್ತು ಮೋಹಕ ಆಲಿಂಗನ
ಮನಸ್ಸು ಬಯಸಿರಲಿಲ್ಲ ಆದರೂ ನೀಡಿದಳು
ಸಿಹಿಚುಂಬನ..!!
                                     ;- ವೆಂಕಟೇಶ್
 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಂಡಿತ್‌ ನೆಹರು ಪ್ರೌಢಶಾಲೆ ಗುರುವಂದನಾ ಕಾರ್ಯಕ್ರಮದ ನೆನಪು

ನನ್ನವಳು ನನ್ನೊಲವಿನ ಬೆಳಕಿವಳು..!

ವಿದ್ಯಾಗಮ‌ ಕಾರ್ಯಕ್ರಮ ಸ್ಥಗಿತದ ಹಿಂದಿನ ಕಾರಣಗಳು