ಮಹಿಳಾ ದಿನಾಚರಣೆಯ ಶುಭಾಶಯಗಳು .....














ಮಹಿಳಾ ದಿನದ ಅರ್ಥ ಪೂರ್ಣ ಆಚರಣೆ ಆಗಬೇಕಾಗಿರುವುದು - ಒಂದು ದಿನದ ಮಹಿಳಾ ಮಹಿಮೆಯ ಗುಣಗಾನದಿಂದ ಅಲ್ಲ. ನಮ್ಮ ಇಂದಿನ ಸಮಾಜದಲ್ಲಿ, ಇಷ್ಟೊಂದು ವಿಜ್ಞಾನ ತಂತ್ರಜ್ಞಾನದ ಪ್ರಗತಿಯ ದಿನದಲ್ಲಿಯೂ ಮಹಿಳೆಯರು ಎಷ್ಟೊಂದು ಕಷ್ಟಗಳನ್ನು ಎದುರಿಸುತ್ತಿದ್ದಾರೆ, ಬವಣೆ ಪಡುತ್ತಿದ್ದಾರೆ - ಎನ್ನುವುದನ್ನು ಎಲ್ಲರೂ ಮನಗಂಡು, ಆಕೆಗೂ, ಅವಳ ಕನಸುಗಳನ್ನು ನನಸು ಮಾಡುವ ಸಮಯ ಕೊಟ್ಟರೆ, ಆಗ ಮಹಿಳಾ ದಿನಕ್ಕೆ ಅರ್ಥ ಬರಲು ಸಾಧ್ಯ.
ಎಲ್ಲರಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳು .....




ಜಗಬೆಳಗೋ ಸೂರ್ಯನಿಗುಂಟು ರಾತ್ರಿಯ ಬಿಡುವು
ಬಾನ ಚಂದ್ರನಿಗುಂಟು ಅರ್ಧ ತಿಂಗಳ ಗಡುವು
ಮಾನವೀಯತೆಯ ಶಕ್ತಿಯಾಗಿ
ಸಮಾಜದ ಕನ್ನಡಿಯಾಗಿ
ಮುಪ್ಪಲ್ಲಿ ಮರೆಯುವ ಮಕ್ಕಳಿಗೆ ತಾಯಿಯಾಗಿ
ದಂಡಿಸುವ ಗಂಡನಿಗೆ  ನಿಸ್ಸಾಹಯಕ ಹೆಂಡತಿಯಾಗಿ
ದಾರಿ ತಪ್ಪಿದ ತಮ್ಮನ ತಿದ್ದುವ ಅಕ್ಕನಾಗಿ
ನೋವು ನಲಿವು ಹಂಚಿಕೊಳ್ಳುವ  ಅಣ್ಣನಿಗೆ ತಂಗಿಯಾಗಿ
ಒಲುಮೆಯ ಗೆಳಯನಿಗೆ ಗೆಳತಿಯಾಗಿ
ಸದಾ ದುಡಿಯುವ ಈ ಹೆಣ್ಣಿಗೆಲ್ಲುಂಟು ಬಿಡುವು.......!

ಹೆಣ್ಣಿಂದಲೇ ಭೂಮಿಗೆ ಬಂದವರಿಗೆ
ಹೆಣ್ಣು ಎಂದಾಕ್ಷಣ ಅದೇಕೋ ಕಾಣೆ ಬೇಸರ
ಮೊಲೆಯುಣಿಸಿ ಬೆಳೆಸಿದವಳ ಮೇಲೆ ತಾತ್ಸಾರ
ಹೇಳಿಕೊಳ್ಳಲು ಮಾತ್ರ ಪ್ರಕೃತಿ ಹೆಣ್ಣು
ಭೂಮಿ ಹೆಣ್ಣು , ಭಾರತಾಂಬೆ ಹೆಣ್ಣು,
ನದಿ ಹೆಣ್ಣು ಸಂಪತ್ತು ಹೆಣ್ಣು....
ಆದರೆ ವಾಸ್ತವದಲ್ಲಿ
ಇನ್ನು ಬೆಳಕು ಕಾಣದ  ಹೆಣ್ಣು ಭ್ರೂಣದ ಮೇಲೆಯೇ
ಎಲ್ಲರ ಕೆಂಗಣ್ಣು.......!
                        - ವೆಂಕಟೇಶ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಂಡಿತ್‌ ನೆಹರು ಪ್ರೌಢಶಾಲೆ ಗುರುವಂದನಾ ಕಾರ್ಯಕ್ರಮದ ನೆನಪು

ನನ್ನವಳು ನನ್ನೊಲವಿನ ಬೆಳಕಿವಳು..!

ವಿದ್ಯಾಗಮ‌ ಕಾರ್ಯಕ್ರಮ ಸ್ಥಗಿತದ ಹಿಂದಿನ ಕಾರಣಗಳು