ಶಾಲೆಯ ಸಮೀಪ ಧೂಮಪಾನ ನಿಷೇದ

ಶಾಲೆಯ ಸಮೀಪ ಧೂಮಪಾನ ನಿಷೇದ
ಎಂಬ ಗೋಡೆಬರಹ ಬರೆಯುತ್ತಿದ್ದ
ಪೈಂಟರ್ ನ ಬಾಯಲ್ಲಿ ಸಿಗರೇಟಿತ್ತು
ಆ ಸಿಗರೇಟಿನಿಂದ ಹೊರಹೊಮ್ಮಿದ ಹೊಗೆ
ಅಲೆ ಅಲೆಯಾಗಿ ತೇಲಿ ಬಂದಿತ್ತು

ಪಾಠ ಹೇಳುತ್ತಿದ್ದ ಶಿಕ್ಷಕನ ಮೂಗಿದೆ ಬಡಿದಿತ್ತು
ಅವನ ತಲೆ ಕೆಡಿಸಿತ್ತು
ಆ ಕ್ಷಣಕ್ಕೆ ಕೈಬೆರಳ ನಡುವಿದ್ದ ಬಿಳಿ ಬಳಪ
ಶಿಕ್ಷಕನಿಗೆ ಸಿಗರೇಟಿನಂತೆ ಗೋಚರಿಸಿತ್ತು

ಜೇಬಲ್ಲಿ ಅಡಗಿ ಕುಳಿತಿದ್ದ ಸಿಗರೇಟು
ಪೈಂಟರ್ ನವನ ಬಳಿ ಬೆಂಕಿ ಕೇಳಲು ಕಾತರಿಸಿತ್ತು
ತರಗಿತಿಯಿಂದ ಹೊರಬಂದ ಶಿಕ್ಷಕನನ್ನು
ಶಾಲೆಯ ಹಿಂದಿನ ಬೇಲಿ ಕೈ ಬೀಸಿ ಕರೆಯುತಿತ್ತು

ಬೇಲಿಯ  ಹಿಂದಿನಿಂದ ಬಂದ ವಾಸನೆ
ಕೊನೆಯ ಬೆಂಚಿನಲ್ಲಿ ನಿದ್ದೆ ಮಾಡುತಿದ್ದ
ತರಲೆ ಗುಂಡನ ಮೂಗಿಗೆ ಬಡಿದಿತ್ತು
ಥಟ್ಟನೆ ಎಚ್ಚರಗೊಂಡ ಗುಂಡನಿಗೆ
ಮನೆಯಲ್ಲಿ ಅಪ್ಪ ಸೇದಿ ಬೀಸಾಡಿದ
ತುಂಡುಬೀಡಿ ಕೈ ಬೀಸಿ ಕರೆದಂತೆ
ಭಾಸವಾಯಿತು....
                                                 -ಕನ್ನಡವೆಂಕಿ


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಂಡಿತ್‌ ನೆಹರು ಪ್ರೌಢಶಾಲೆ ಗುರುವಂದನಾ ಕಾರ್ಯಕ್ರಮದ ನೆನಪು

ನನ್ನವಳು ನನ್ನೊಲವಿನ ಬೆಳಕಿವಳು..!

ವಿದ್ಯಾಗಮ‌ ಕಾರ್ಯಕ್ರಮ ಸ್ಥಗಿತದ ಹಿಂದಿನ ಕಾರಣಗಳು