ಸಂಕ್ರಾಂತಿ ಶುಭಾಶಯಗಳು

ಮನಸ್ಸು-ಮನಸ್ಸುಗಳ ನಡುವಿನ ಕಾರ್ಮೋಡ ಸರಿದು
ಸಮೃದ್ದ ಸೋದರತೆಯಲಿ ಮೂಡಲಿ ಶುಭಶಾಂತಿ
ಕಾದು ಒಣಗಿದ ಇಳೆಗೆ  ವರ್ಷಧಾರೆಯಾಗುವಂತೆ
ನೊಂದ ಮನಸ್ಸುಗಳಿಗೆ ಭರವಸೆಯ ಬೆಳಕಾಗಲಿ ಈ ಸಂಕ್ರಾಂತಿ

ಸಂಕ್ರಾಂತಿ ಬರಲಿ  ಬತ್ತಿದ ನದಿಗೆ ಬಂದ ಗಂಗೆಯಾಗಿ
ಬೀಸಲಿ ತಂಗಾಳಿ ಮುದ ನೀಡುತಾ ಮನಕ್ಕೆ ಪ್ರಸನ್ನವಾಗಿ
ತೂಗುತಿವೆ ಹೊಲಗದ್ದೆಗಳಲ್ಲಿ ತೆನೆಗಳು ಭಾರವಾಗಿ
ರೈತನ ಮನೆ ತುಂಬುತ್ತಿವೆ ಬೆಳೆಗಳು  ಬಂಗಾರವಾಗಿ

ಈ ಸಂಕ್ರಾಂತಿ ನೀಡಲಿ ದುಡಿದ ಜೀವಗಳಿಗೆ ನವಚೇತನ
ಸೂರ್ಯ ಕಿರಣಕೆ ಮೈಯೊಡ್ಡಿ  ತುಂಬಲಿ ಹೊಸತನ
ನನಸಾಗುವ ಹೊಸ  ಕನಸುಗಳಿಗೆ ಚೇತನವ ತುಂಬಲು ನೆರವಾಗಿ
ಬರಲಿ ಈ ಸಂಕ್ರಾಂತಿ ಎಲ್ಲರಿಗೂ ವರವಾಗಿ
:-ವೆಂಕಟೇಶ್ 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಂಡಿತ್‌ ನೆಹರು ಪ್ರೌಢಶಾಲೆ ಗುರುವಂದನಾ ಕಾರ್ಯಕ್ರಮದ ನೆನಪು

ನನ್ನವಳು ನನ್ನೊಲವಿನ ಬೆಳಕಿವಳು..!

ವಿದ್ಯಾಗಮ‌ ಕಾರ್ಯಕ್ರಮ ಸ್ಥಗಿತದ ಹಿಂದಿನ ಕಾರಣಗಳು