ಅಮ್ಮನ ಕವನ

                                                              
ಏನಾಗುವನೋ ಇವನೇನಾಗುವನೋ
ಸಿಕ್ಕ ಸಿಕ್ಕಿದ್ದನ್ಲಲ್ಲಾ ಭಕ್ಷಿಸುವನೋ
ರಕ್ಷಣಾ ಪಡೆಗೇನಾದರು ಸೇರುವನೋ
ಸಣ್ಣ ವಿಷಯಕ್ಕೆ ಕೋಪಿಸಿಕೊಳ್ಳುವನು
BMTC ಕಂಡಕ್ಟರನಾಗುವನೋ.....

ಏನಾಗುವನೋ ಇವನೇನಾಗುವನೋ
ಸಿಕ್ಕ ಸಿಕ್ಕವರಿಗೆಲ್ಲಾ ಹೊಡೆಯುವನೋ
ಕೋಪಿಷ್ಟ ಪೋಲಿಸ್ ಪೇದೆಯಾಗುವನೋ
ನಿಂತಲ್ಲಿ ನಿಲ್ಲದೆ ಓಡುವನೋ
ಇವನೇನಾದರೂ ಅಂಚೆ ಮಾಸ್ತರನಾಗುವನೋ.....

ಏನಾಗುವನೋ ಇವನೇನಾಗುವನೋ
ಕಂಡ ಕಂಡವರನ್ನೆಲ್ಲಾ ಪೀಡಿಸುವನೋ
ವಿಮಾ ಪಾಲಿಸಿ ಏಜೆಂಟನಾಗುವನೋ
ಕಂಡ ಕಂಡವರ ಹತ್ತಿರ ಕೈ ಚಾಚುವನೋ
ಸರಕಾರಿ ಕಛೇರಿ ನೌಕರನಾಗುವನೋ.....

ಏನಾಗುವನೋ ಇವನೇನಾಗುವನೋ
ಯಾವಾಗಲೂ ಗುಂಪುಗಾರಿಕೆ ಮಾಡುವನೋ
ರಾಜಕೀಯ ಮರಿ ಪುಢಾರಿಯಾಗುವನೋ
ಒಬ್ಬನೇ  ಪಟ ಪಟ ಮಾತನಾಡುವನೋ
ಕಾಲೇಜು ಉಪನ್ಯಾಸಕನಾಗುವನೋ.....

ಏನಾಗುವನೋ ಇವನೇನಾಗುವನೋ
ತಾಯಿಯಲ್ಲಿ ಹೆಚ್ಚು ಪ್ರೀತಿ  ಇಟ್ಟಿರುವನು
ಅಪ್ಪಟ ಕನ್ನಡದ ಕಂದ  ಇವನಾಗುವನು.........

                                       :- ಕನ್ನಡ ವೆಂಕಿ
                                          24-04-2004

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಂಡಿತ್‌ ನೆಹರು ಪ್ರೌಢಶಾಲೆ ಗುರುವಂದನಾ ಕಾರ್ಯಕ್ರಮದ ನೆನಪು

ನನ್ನವಳು ನನ್ನೊಲವಿನ ಬೆಳಕಿವಳು..!

ವಿದ್ಯಾಗಮ‌ ಕಾರ್ಯಕ್ರಮ ಸ್ಥಗಿತದ ಹಿಂದಿನ ಕಾರಣಗಳು