ನಮ್ ಇಸ್ಕೂಲ್ ಡ್ರಾಮ
                        (ಬೊಂಬೆ ಆಡ್ಸೋನು ಮೇಲೆ ಕುಂತವ್ನೆ  ಹಾಡಿನ ರಾಗದ ಧಾಟಿ)

ಸಂಬಳ ಕೊಡೋನು ಮೇಲೆ ಕುಂತವ್ನೆ
ನಮಗೆ ನಿಮಗೆ ಯಾಕೆ ಟೆನ್ಷನ್  IIII
ಸಿಸ್ಟಮ್ ಪೊಲಿಟಿಕ್ಸ ಕೈಲಿ ನಾವೇನು ಮಾಡೋಣ
ಎಲ್ಲಾರು ಕಿವಿ ಮುಚ್ಕೊಂಡು ಹೇಳಿದ ಕೇಳಾಣ  IIII

NCF ತಳ ಯಾವುದು  RTE ಬುಡ ಯಾವುದು
BEO  visit ಯಾವುದು BRC Notice ಯಾವುದು
            DDPI ಖಾರಾಬಾತ್   BEO ಕೇಸರೀ ಬಾತ್
            HM ಲೈಪ್ ಚೌಚೌಬಾತ್  ಇನ್ಯಾಕೆ ಸ್ಕೂಲ್ ಮಾತು
ಬಿಸಿಯೂಟ ತಿಂದಮೇಲೆ
ನಿದ್ದೆ ಬರದೆ ಇರ್ತದಾ ?
ಬಿಸಿ ಬಿಸಿ ಅನ್ನ ಸಾರು ತಿನ್ನದೇ ಇರಾಕ್ ಆಯಿತದಾ..?
CRP ಬರೋದಿಲ್ಲಾ ನಾವೇನು ಮಾಡಾಣ
ಅವರ್ ಕೇಳಿದ್ ಡೇಟಾ ಕೊಡದೆ ಡ್ರಾಮಾ ಆಡ್ಸೋಣಾ...   IIII


ಒಂದೊಂದು ಸ್ಕೂಲಲ್ಲೂ ಬೇರ್ ಬೇರೆ ಟೀಚರ್
ಅಲ್ಲೊಬ್ರು ಸೂಪರ್ ಇಲ್ಲೊಬ್ರು ಪಾಪರ್
ಓದಿಸೋ ನಮ್ ಮೇಷ್ಟ್ರು , ಇಲಾಖೆ ಆಪೀಸರ್ರು
ಸುಸ್ತಾಗಿ ಮಲಗವರೆ ಯಾರಪ್ಪ ಎಬ್ಬಿಸೋರು …..
            ಯಾವನೋ ಕಟ್ಸಿ ಹೋದ ಹಳೇ ಬಿಲ್ಡಂಗ್ ಈ ಸ್ಕೂಲು
            ಡೋರ್ ಹಾಕ್ಕೊಂಡ್ ಹೋಗಿ ಮೇಷ್ಟ್ರೇ ನಿಲ್ಲಬೇಡಿ ನೀವೆಲ್ಲು
            BEO ರೋಡಲ್ ಸಿಕ್ರೆ ನಾವೇನ್ ಮಾಡೋಣ
            ಅವರೀಗು ಕಾಣಿಸ್ದಂಗೆ ಎಸ್ಕೇಪ್ ಆಗೋಣ.....  II11

ಸಂಬಳ ಕೊಡೋನು ಮೇಲೆ ಕುಂತವ್ನೆ
ನಮಗೆ ನಿಮಗೆ ಯಾಕೆ ಟೆನ್ಷನ್  IIII
ಸಿಸ್ಟಮ್ ಪೊಲಿಟಿಕ್ಸ ಕೈಲಿ ನಾವೇನು ಮಾಡೋಣ
ಎಲ್ಲಾರು ಕಿವಿ ಮುಚ್ಕೊಂಡು ಹೇಳಿದ ಕೇಳಾಣ  IIII

                                                                                                                        ರಚನೆ: ವೆಂಕಟೇಶ್

ಕಾಮೆಂಟ್‌ಗಳು

  1. ವೆಂಕಟೇಶ್ ಸರ್ ವಾಸ್ತವ ಬದುಕನ್ನು ಸ್ಪರ್ಶಿಸುವ ನಿಮ್ಮ ಕವನ ಉತ್ತಮವಾಗಿದೆ. ಇನ್ನೂ ಹೆಚ್ಚಿನ ಕವನಗಳನ್ನು ನಿರೀಕ್ಷಿಸುತ್ತೇನೆ.
    ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  2. Venkatesh sir, Very nice, ನಿಜಕ್ಕೂ ನಮ್ಮ ವ್ಯವಸ್ಥೆ, ನಾವಿರುವ ಸ್ಥಿತಿ ಇದರ ಬಗ್ಗೆ , ನಮ್ಮ ಮನೋಭಾವನೆ ಇವುಗಳ ಮೇಲೆ ಬೆಳಕು ಚೆಲ್ಲಿದ್ದೀರಿ. ನಮಗೆ ತರಬೇತಿ ನೀಡುವಾಗ ತಾವು ಮಿತಭಾಷಿ, ಆದರೆ ನಿಮ್ಮೊಳಗೊಬ್ಬ ಕವಿ ಇದ್ದಾನೆ ಎಂದು ಈ ದಿನ ತಿಳಿಯಿತು.ಆಡದಲೇ ಮಾಡುವವ(ಬರೆಯುವವ) ರೂಢಿಯೊಳಗುತ್ತಮನು- ಮಿತಭಾಷಿ- ಆದರೆ ಬಹುವಿಚಾರಧಾರಿ ತಾವು.ತಮ್ಮಿಂದ ಇನ್ನಷ್ಟು ಕವನ ನಮಗಾಗಿ --ನಿರೀಕ್ಷೆಯಲ್ಲಿ
    ಭಾಗ್ವತ್

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಂಡಿತ್‌ ನೆಹರು ಪ್ರೌಢಶಾಲೆ ಗುರುವಂದನಾ ಕಾರ್ಯಕ್ರಮದ ನೆನಪು

ನನ್ನವಳು ನನ್ನೊಲವಿನ ಬೆಳಕಿವಳು..!

ವಿದ್ಯಾಗಮ‌ ಕಾರ್ಯಕ್ರಮ ಸ್ಥಗಿತದ ಹಿಂದಿನ ಕಾರಣಗಳು