ದೊಡ್ಡವರ ಮಕ್ಕಳೇಕೆ ಹೀಗೆ ...?
ಟಾಟಾ ಬಿರ್ಲಾ, ಅಜಿಂ ಪ್ರೇಮ್‌ಜಿ, ನಾರಾಯಣಮೂರ್ತಿ ರವರಿಗೂ ಸಹ ಮಕ್ಕಳಿದ್ದಾರೆ ಅಲ್ವಾ, ಅವರ ಬಳಿಯೂ ಅಳೆತಗೆ ಸಿಗದಷ್ಟು ದುಡ್ಡು ಆಲ್ವಾ, ನಮ್ಮ ರಾಜಕಾರಣಿಗಳು ಅವರಿಗಿಂತ ಶ್ರೀಮಂತರಾ, ಆದರೆ ಅವರು ಯಾರೂ ಈ ರೀತಿಯ ದರ್ಪ ದಬ್ಬಾಳಿಕೆ ಮಾಡಿದರೂ ಅನ್ನೋ ಸುದ್ದಿ ನಾವು ನೋಡೇ ಇಲ್ಲ, ಅವರು ಯಾರೂ ಸಹ ಈ ರೀತಿಯ ಕುಖ್ಯಾತಿಯಿಂದ ಹೆಸರು ಮಾಡಲಿಲ್ಲ. ಆದರೆ ನಿನ್ನೆ ಮೊನ್ನೆ ಅಧಿಕಾರಕ್ಕೆ ಬಂದ ರಾಜಕೀಯ ವ್ಯಕ್ತಿಗಳ ಮಕ್ಕಳು, ಐ.ಎ.ಎಸ್ ಅಧಿಕಾರಿಗಳು ಹಾಗು ಅವರ ಮಕ್ಕಳು, ಧಿಡೀರ್ ಯಶಸ್ಸುಕಂಡ ಸಿನಿಮಾ ನಟರು ಹಾಗು ಅವರ ಮಕ್ಕಳು ಮಾತ್ರ ಯಾಕೆ ಇಷ್ಟು ಅಹಂಕಾರದಿಂದ ವರ್ತಿಸುತ್ತಾರೆ. ಹೋದಲ್ಲೆಲ್ಲಾ ನಾವು ದೊಡ್ಡವರ ಮಕ್ಕಳು ಎಂಬ ದರ್ಪ ತೊರಿಸಿ ದಬ್ಬಾಳಿಕೆ ಮಾಡುತ್ತಾರೆ ? ಹಗಲಿನಲ್ಲಿಯೇ ನಡುರಸ್ತೆಯಲ್ಲೇ ಕುಡಿದು ಕುಪ್ಪಳಿಸಿದ ಸಚಿವರ ಮಗ ಮತ್ತು ಗ್ಯಾಂಗು, ಪೋಲಿಸ್ ಅಧಿಕಾರಿಗಳನ್ನು ಮನೆ ಆಳುಗಳಾಗಿ ಮಾಡಿಕೊಂಡು ಪಾರ್ಟಿಯಲ್ಲಿ ಅವರ ಹೆಗಲ ಮೇಲೆ ಕೂತು ಮಜಾ ಮಾಡಿದ ಮತ್ತೊಬ್ಬ ಸಚಿವರ ಮಗನ ಸುದ್ದಿಯನ್ನು ಇತ್ತೀಚೆಗಷ್ಟೇ ಮೋಡಿದ್ದೇವೆ. ಯಾಕೆಂದರೆ ಇವರಿಗೆ ನಿಯತ್ತಿನಿಂದ ಕಷ್ಟಪಟ್ಟು ದುಡಿದ ಹಣದ ಬೆಲೆ ಗೊತ್ತಿರುವುದಿಲ್ಲ, ಇವರ ಅಪ್ಪಂದಿರು ಸಹ ಪ್ರಾಮಾಣಿಕವಾಗಿ ಹಣ ಸಂಪಾದಿಸಿರುವುದಿಲ್ಲ. ಕಷ್ಟಪಟ್ಟು ದುಡಿದ ಹಣಕ್ಕೆ ಲೆಕ್ಕವಿರುತ್ತದೆ ಹಾಗು ಬೆಲೆಯಿರುತ್ತದೆ, ಅದರಲ್ಲಿ ಪೈಸಾ ಪೈಸಾ ಖರ್ಚು ಮಾಡಬೇಕಾದರೂ ಸಹ ನಾವು ಯೋಚಿಸುತ್ತೇವೆ. ಆದರೆ ನಮ್ಮ ಕೈಗೆ ಯಾವುದ