ದೊಡ್ಡವರ ಮಕ್ಕಳೇಕೆ ಹೀಗೆ ...?


ಟಾಟಾ ಬಿರ್ಲಾ, ಅಜಿಂ ಪ್ರೇಮ್‌ಜಿ, ನಾರಾಯಣಮೂರ್ತಿ ರವರಿಗೂ ಸಹ ಮಕ್ಕಳಿದ್ದಾರೆ ಅಲ್ವಾ, ಅವರ ಬಳಿಯೂ ಅಳೆತಗೆ ಸಿಗದಷ್ಟು ದುಡ್ಡು ಆಲ್ವಾ, ನಮ್ಮ ರಾಜಕಾರಣಿಗಳು ಅವರಿಗಿಂತ ಶ್ರೀಮಂತರಾ, ಆದರೆ ಅವರು ಯಾರೂ ಈ ರೀತಿಯ ದರ್ಪ ದಬ್ಬಾಳಿಕೆ ಮಾಡಿದರೂ ಅನ್ನೋ ಸುದ್ದಿ ನಾವು ನೋಡೇ ಇಲ್ಲ, ಅವರು ಯಾರೂ  ಸಹ ಈ ರೀತಿಯ ಕುಖ್ಯಾತಿಯಿಂದ ಹೆಸರು ಮಾಡಲಿಲ್ಲ. ಆದರೆ ನಿನ್ನೆ ಮೊನ್ನೆ ಅಧಿಕಾರಕ್ಕೆ ಬಂದ ರಾಜಕೀಯ ವ್ಯಕ್ತಿಗಳ ಮಕ್ಕಳು, ಐ.ಎ.ಎಸ್ ಅಧಿಕಾರಿಗಳು ಹಾಗು ಅವರ ಮಕ್ಕಳು, ಧಿಡೀರ್ ಯಶಸ್ಸುಕಂಡ ಸಿನಿಮಾ ನಟರು ಹಾಗು ಅವರ ಮಕ್ಕಳು ಮಾತ್ರ ಯಾಕೆ ಇಷ್ಟು ಅಹಂಕಾರದಿಂದ ವರ್ತಿಸುತ್ತಾರೆ. ಹೋದಲ್ಲೆಲ್ಲಾ ನಾವು ದೊಡ್ಡವರ ಮಕ್ಕಳು ಎಂಬ ದರ್ಪ ತೊರಿಸಿ ದಬ್ಬಾಳಿಕೆ ಮಾಡುತ್ತಾರೆ ? ಹಗಲಿನಲ್ಲಿಯೇ ನಡುರಸ್ತೆಯಲ್ಲೇ ಕುಡಿದು ಕುಪ್ಪಳಿಸಿದ ಸಚಿವರ ಮಗ ಮತ್ತು ಗ್ಯಾಂಗು, ಪೋಲಿಸ್ ಅಧಿಕಾರಿಗಳನ್ನು ಮನೆ ಆಳುಗಳಾಗಿ ಮಾಡಿಕೊಂಡು ಪಾರ್ಟಿಯಲ್ಲಿ ಅವರ ಹೆಗಲ ಮೇಲೆ ಕೂತು ಮಜಾ ಮಾಡಿದ ಮತ್ತೊಬ್ಬ ಸಚಿವರ ಮಗನ ಸುದ್ದಿಯನ್ನು ಇತ್ತೀಚೆಗಷ್ಟೇ ಮೋಡಿದ್ದೇವೆ.
ಯಾಕೆಂದರೆ ಇವರಿಗೆ ನಿಯತ್ತಿನಿಂದ ಕಷ್ಟಪಟ್ಟು ದುಡಿದ ಹಣದ ಬೆಲೆ ಗೊತ್ತಿರುವುದಿಲ್ಲ, ಇವರ ಅಪ್ಪಂದಿರು ಸಹ ಪ್ರಾಮಾಣಿಕವಾಗಿ ಹಣ ಸಂಪಾದಿಸಿರುವುದಿಲ್ಲ. ಕಷ್ಟಪಟ್ಟು ದುಡಿದ ಹಣಕ್ಕೆ ಲೆಕ್ಕವಿರುತ್ತದೆ ಹಾಗು ಬೆಲೆಯಿರುತ್ತದೆ, ಅದರಲ್ಲಿ ಪೈಸಾ ಪೈಸಾ ಖರ್ಚು ಮಾಡಬೇಕಾದರೂ ಸಹ ನಾವು ಯೋಚಿಸುತ್ತೇವೆ. ಆದರೆ ನಮ್ಮ ಕೈಗೆ ಯಾವುದೋ ಅಕ್ರಮದ ದುಡ್ಡು ಬಂದಾಗ ನಾವು ಅದನ್ನು ಖರ್ಚು ಮಾಡೋದು ಕೇವಲ ಅನೀತಿಕರ ಕಾರ್ಯಗಳಿಗೇ ಮಾತ್ರವೇ ಅನ್ನೋದು ಸತ್ಯ.
ಈ ರೀತಿಯ ಅನೀತಿ, ಅಕ್ರಮ, ದರ್ಪ ದಬ್ಬಾಳಿಕೆಯಿಂದಲೇ ಬದುಕೋ ದೊಡ್ಡವರ ಮಕ್ಕಳಿಗೆ ಒಂದು ನ್ಯಾಯ, ಜನ ಸಾಮನ್ಯರಿಗೆ ಒಂದು ನ್ಯಾಯಾನಾ...? ಅದರಲ್ಲೂ ಊಸರವಳ್ಳಿಯಂತೆ ಸಂದರ್ಭಕ್ಕೆ ತಕ್ಕಂತೆ ಬಣ್ಣ ಬದಲಾಯಿಸೋ ರಾಜಕಾರಣಿಗಳಿಗೆ ಮತ್ತು ಅವರ ಮಕ್ಕಳಿಗೆ ಪ್ರತ್ಯೇಕವಾದ ಸಂವಿಧಾನ ಮತ್ತು ಕಾನೂನು ಇರಬಹುದಾ ಎಂದು ಅನುಮಾನ ಮೂಡಿಸುತ್ತಿದೆ.
ಮೇಷ್ಟ್ರು ಮಕ್ಕಳು ದಡ್ಡರಾಗ್ತಾರೆ ಪೋಲೀಸಿನವರ ಮಕ್ಕಳು ಕಳ್ಳರಾಗ್ತಾರೆ ಅನ್ನೋದು ನಮ್ಮ ನಡುವೆ ಇರುವ ನಾಣ್ಣುಡಿ, ಇದು ಎಷ್ಟು ನಿಜವೋ ತಿಳಿಯದು ಆದರೆ ಇತ್ತೀಚೆಗೆ ನಮ್ಮ  ಶಿಕ್ಷಕರ ತರಬೇತಿಯೊಂದರಲ್ಲಿ ಈ ಮೇಲಿನ ಮಾತಿಗೆ ಪೂರಕವಾಗಿ ಶಿಕ್ಷಕರೊಬ್ಬರು ಹಂಚಿಕೊಂಡ ಮಾತು ಸದಾ ನನಗೆ ನೆನಪಾಗುತ್ತದೆ. "ಮೇಷ್ಟ್ರು ಮಕ್ಕಳೆಲ್ಲಾ ದಡ್ಡರಾಗಿರೊಲ್ಲ ಅಥವಾ ಪೋಲಿಸಿನವರ ಮಕ್ಕಳೆಲ್ಲಾ ಕಳ್ಳರಾಗಿರಲ್ಲ, ಇಂಜಿನಿಯರ್ ಡಾಕ್ಟರ್ ನಂತಹ ದೊಡ್ಡ ದೊಡ್ಡ ಗೌರವಾನ್ವಿತ ಹುದ್ದೆಯಲ್ಲಿರುವ ಮೇಷ್ಟು/ಪೋಲಿಸಿನವರ ಮಕ್ಕಳನ್ನು ಸಹ ನೋಡಬಹುದು ..ಆದರೆ ಆ ಮೇಷ್ಟ್ರು ತನ್ನ ವೃತ್ತಿಯಲ್ಲಿ ಯಾವ ಮಕ್ಕಳಿಗೂ ಅನ್ಯಾಯ ಮಾಡದೇ ವೃತ್ತಿಯನ್ನು ಪೂಜ್ಯಭಾವನೆಯಿಂದ ನೋಡಿದ್ದರೆ ಮಾತ್ರ ಅದೇ ರೀತಿ ಪೋಲೀಸಿನವರು ಸಹ ಪ್ರಾಮಾಣಿಕವಾಗಿ ಕರ್ತವ್ಯ ಮಾಡಿದ್ದಾಗ ಮಾತ್ರ".
-ಕನ್ನಡವೆಂಕಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಂಡಿತ್‌ ನೆಹರು ಪ್ರೌಢಶಾಲೆ ಗುರುವಂದನಾ ಕಾರ್ಯಕ್ರಮದ ನೆನಪು

ನನ್ನವಳು ನನ್ನೊಲವಿನ ಬೆಳಕಿವಳು..!

ವಿದ್ಯಾಗಮ‌ ಕಾರ್ಯಕ್ರಮ ಸ್ಥಗಿತದ ಹಿಂದಿನ ಕಾರಣಗಳು