ಪ್ರೀತಿಗೆ ಮತ್ತೊಂದು ಹೆಸರೇ ಕಾಳಜಿ ಅಲ್ವಾ ....?


ಎಲ್ಲೆಡೆ ಈದಿನ ಪ್ರೇಮಿಗಳ ದಿನದ ಸಂಭ್ರಮ, ಕೆಂಪುಗುಲಾಬಿಗೆ ಎಂದೂ ಕಾಣದ ಬೇಡಿಕೆ. ಪ್ರೇಮ ನಿವೇದನೆಗಾಗಿ ಕೊಟ್ಟ ಗುಲಾಬಿ ಬಾಡುವಷ್ಟರಲ್ಲೇ ಒಡೆದು ಹೋಗುವ ಅದೆಷ್ಟೋ ಹೃದಯಗಳು.....
ಪ್ರೇಮಿಗಳ ದಿನ ನಮ್ಮ ಸಂಸ್ಕೃತಿಗೆ ವಿರುದ್ದವಾದುದು ಎಂದು ವಿರೋಧಿಸುವ ಕೆಲವು ಸಂಘಟನೆಗಳು.. ಹೀಗೆ ಪ್ರತೀ ವರ್ಷ ಈ ದಿನ ಬರುತ್ತೆ ಹೋಗುತ್ತೇ, ಆದರೆ ಈ ಪ್ರೇಮಿಗಳ ದಿನ ಕೇವಲ ಹದಿಹರೆಯದ ಹುಡುಗ ಹುಡಿಗಿಯ ನಡುವಿಗೆ ಪ್ರೇಮಕ್ಕೇ ಮಾತ್ರವೇ ಸೀಮಿತವೇ..? ಹುಡುಗ ಹುಡುಗಿ ಕೈ ಕೈ ಹಿಡಿದು ಪಾರ್ಕ್, ಸಿನಿಮಾ, ಹೋಟೆಲ್ ಸುತ್ತಿದೋ ಒಂದು ಸಂಭ್ರಮವೇ ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ.
ಪ್ರೀತಿಗೆ ಯಾವುದೇ ಬೇಲಿಯಿಲ್ಲ, ಅದು ಯಾರಲ್ಲಿ ಬೇಕಾದರೂ ಇರಬಹುದು, ಹುಡುಗ ಹುಡುಗಿ ಮಾತ್ರವಲ್ಲ, ಅಪ್ಪ-ಮಗಳು, ಅಮ್ಮ-ಮಗ, ಅಕ್ಕ -ತಮ್ಮ, ಅಣ್ಣ-ತಂಗಿ, ಸ್ನೇಹಿತರು, ಗುರುಗಳು ಇತ್ಯಾದಿ... ಇವುಗಳಲೆಲ್ಲಾ ನಾವು ಪ್ರೀತಿ ಹುಡುಕಬೇಕಿದೆ...
"ಇಡೀ ಜಗತ್ತಿನಲ್ಲಿಯೇ ನನ್ನ ಮಗನೇ ನನ್ನ ಸರ್ವಸ್ವ" ಎನ್ನುವ ಅಮ್ಮನದು ಪ್ರೀತಿ.
"ಜವಾಬ್ದಾರಿಯಿಂದ ಬದುಕುವುದನ್ನು ಕಲಿ, ಸರಿಯಾದವರ ಸಹವಾಸ ಮಾಡು" ಎಂದು ಸದಾ ಗದರುವ ಅಪ್ಪನ ಕಾಳಜಿಯೇ ಪ್ರೀತಿ.
"ನಿನಗೇ ಅಂತ ಒಂದು ಹುಡುಗಿ ನೋಡಿದೀನಿ ಕಣೋ, ಇದಕ್ಕಿಂತ ಚಂದ ಇರೋ ಹುಡುಗಿ ಸಿಗಲ್ಲಾ ನೋಡೋ" ಅನ್ನೋ ಅಕ್ಕನದು ಪ್ರೀತಿ.
"ಯಾಕೋ ಒದ್ದಾಡ್ತಿಯಾ ಒಬ್ಬನೇ, ನಾನಿಲ್ಲವಾ ನೋಡ್ಕೋತೀನಿ ಬಿಡು" ಅನ್ನೋ ಅಣ್ಣನದು ಪ್ರೀತಿ.
"ಯಾಕೋ ಬೇಜಾರಲ್ಲಿ ಇದೀಯಾ, ಸುಮ್ನೆ ತಲೆ ಕೆಡಿಸ್ಕೋಬೇಡ್ವೋ" ಅಂತ ತಲೆ ಸವರೋ ತಂಗಿಯದು ಪ್ರೀತಿ.
"ನೀನ್ ಇಲ್ಲ ಅಂದ್ರೆ ನಮ್ಮ ಗುಂಪಲ್ಲಿ ಮಜಾನೇ ಇರಲ್ಲ ಮಾರಾಯ" ಅನ್ನೋ ಸ್ನೇಹಿತರದು ಪ್ರೀತಿ.
ತನ್ನ ಕೈಲಿ ಆಗದಿದ್ರು ಸಹ ಪುಟ್ಟ ಕೈಗಳಿಂದ ದಣಿದು ಬಂದ ಅಪ್ಪನ ತಲೆ ಮಸಾಜ್‌ ಮಾಡೋ ಮಗುವಿನದು ಪ್ರೀತಿ.
ಸಂಜೆ ಮನೆಗೆ ಬಂದ ಗಂಡನಿಗಾಗಿ ಬಿಸಿ ಕಾಫಿ ಮಾಡಿ, ತಾನು ಮೊದಲು ಒಂದು ಗುಟುಕು ಕುಡಿದು ರುಚಿ ನೋಡಿ ಕೊಡುವ ಹೆಂಡತಿಯದು ಪ್ರೀತಿ.
ರುಚಿಯಾದ ತಿಂಡಿ, ಚೆಂದದ ವಸ್ತು ತನ್ನ ಮಗನಿಗೇ ಸಲ್ಲಬೇಕೆಂದು ಜೋಪಾನವಾಗಿಡುವ ಅಮ್ಮನದು ಪ್ರೀತಿ.

ಕೇವಲ ಹುಡುಗ ಹುಡುಗಿ ನಡುವಿನದು ಮಾತ್ರವೇ ಪ್ರೀತಿಯಲ್ಲ, ನಮ್ಮ ಬಗ್ಗೆ ಕಾಳಜಿ ಮಾಡೋ ಪ್ರತಿಯೊಬ್ಬರದೂ ಸಹ ಪ್ರೀತೀನೇ ಅಲ್ವಾ...
ಪ್ರೀತಿಗೆ ಮತ್ತೊಂದು ಹೆಸರೇ ಕಾಳಜಿ ಅಲ್ವಾ....!!!

(ಸಾಮಾಜಿಕ ಜಾಲತಾಣದಲ್ಲಿ ಬಂದ ಸಂದೇಶದ ಕನ್ನಡಾನುವಾದ)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಂಡಿತ್‌ ನೆಹರು ಪ್ರೌಢಶಾಲೆ ಗುರುವಂದನಾ ಕಾರ್ಯಕ್ರಮದ ನೆನಪು

ನನ್ನವಳು ನನ್ನೊಲವಿನ ಬೆಳಕಿವಳು..!

ವಿದ್ಯಾಗಮ‌ ಕಾರ್ಯಕ್ರಮ ಸ್ಥಗಿತದ ಹಿಂದಿನ ಕಾರಣಗಳು