ಶಿಕ್ಷಣ ಅವಶ್ಯಕ ಸೇವೆ ಅಲ್ಲವೇ ?

 ಶಿಕ್ಷಣ ಅವಶ್ಯಕ ಸೇವೆ ಅಲ್ಲವೇ ? 


ಇತ್ತೀಚೆಗೆ ಸರ್ಕಾರಿ ನೌಕರರೆಲ್ಲಾ ಹಲವು ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರ ಹೂಡಿದರು. ಆಗ ಆರೋಗ್ಯ ಮತ್ತು ಸಾರಿಗೆ ಸೇವೆಗಳನ್ನು ಅತೀ ಅವಶ್ಯಕ ಎಂದು ಪರಿಗಣಿಸಲಾಯಿತು. ಆದರೆ ಶಿಕ್ಷಣ ??

ಪಸ್ತುತ ಶಿಕ್ಷಣ ಅವಶ್ಯಕ ಸೇವೆಯಾಗು ಪರಿಗಣನೆಯಾಗಿಲ್ಲದಿರುವುದು ದುರದೃಷ್ಟಕರವಾದುದು.  

ಅಷ್ಟಕೂ ಶಿಕ್ಷಣವನ್ನು ಯಾಕೆ ಅತ್ಯಗತ್ಯ ಸೇವೆ ಅಂತ ಪರಿಗಣಿಸಬೇಕು ? 

ಶಿಕ್ಷಣ ಏಕೆ ಬೇಕು ಅಂತ  ಯಾವುದೇ ವ್ಯೆಕ್ತಿಗೆ ಕೇಳಿದರೆ,  ಶಿಕ್ಷಣ ಬದುಕು ಕಟ್ಟಿಕೊಳ್ಳಲು , ತನ್ನ ಹಕ್ಕುಗಳನ್ನು ತಿಳಿಯಲು, ವ್ಯವಸ್ಥಿತ ಜೀವನ ನಡೆಸಲು, ಸರಿ ತಪ್ಪುಗಳನ್ನು ವಿಶ್ಲೇಷಿಸಲು, ವೃತ್ತಿ ಪಡೆದುಕೊಳ್ಳಲು, ಹಣ ಅಂತಸ್ತು ಮಾಡಿಕೊಳ್ಳಲು ಇತ್ಯಾದಿ... ಹೀಗೆ ಪ್ರತಿಯೊಬ್ಬರು ಶಿಕ್ಷಣದ ಅವಶ್ಯಕತೆಯನ್ನು ತಮ್ಮ ವೈಯುಕ್ತಿಕ ಚೌಕಟ್ಟಿನಲ್ಲಿ ವಿವರಿಸುತ್ತಾ ಹೋಗುತ್ತಾರೆ. 

ಆದರೆ ಸಮಾಜದ ಒಳಿತಿಗಾಗಿ ಶಿಕ್ಷಣದ ಅವಶ್ಯಕತೆ ಏನು, ಒಂದು ದೇಶದ ಪ್ರಗತಿಯಲ್ಲಿ ಶಿಕ್ಷಣದ ಅವಶ್ಯಕತೆ ಏನು ಎಂಬುದರ ಬಗ್ಗೆ ವಿಶ್ಲೇಷಣೆಯಾಗುವುದಿಲ್ಲ. ಇದರಿಂದಾಗಿಯೇ ಶಿಕ್ಷಣ ಅತ್ಯವಶ್ಯಕ ಸೇವೆಯಾಗಿ ಪರಿಗಣನೆಯಾಗಿಲ್ಲ.  

ಸಾಮಾಜಿಕ ನ್ಯಾಯಕ್ಕಾಗಿ, ತಳ ಸಮುದಾಯಗಳ ಆರ್ಥಿಕ/ಸಾಮಾಜಿಕ ಅಭಿವೃದ್ದಿಗಾಗಿ, ಶಾಂತಿಯುತ ಸಮಾಜಕ್ಕಾಗಿ, ಪ್ರಜಾಪ್ರಭುತ್ವ ರಕ್ಷಣೆಗಾಗಿ, ಜಾತ್ಯಾತೀತವಾದ ಜೀವನಕ್ಕಾಗಿ ಶಿಕ್ಷಣದ ಅವಶ್ಯಕತೆ ಮುಖ್ಯವಾಗಿದೆ. 

ಒಟ್ಟಿನಲ್ಲಿ ಸಾಮಾಜಿಕ ಬದಲಾವಣೆಗಾಗಿ (Social Change) ಶಿಕ್ಷಣ ಅಗತ್ಯ ಎಂಬುದು ಆಳುವ ಸರ್ಕಾರಗಳಿಗೆ ಮನವರಿಕೆಯಾಗಬೇಕಿದೆ.

ಶಿಕ್ಷಣವಿಲ್ಲದೆ ನಾವು ಬದುಕಲು ಸಾಧ್ಯವಿಲ್ಲವೇ 

 ಸಾಧ್ಯವಿದೆ  ಆದರೆ ಅಹಿಂಸೆ, ಕೋಮುವಾದ, ಅಶಾಂತಿ ಮತ್ತು ತಪ್ಪುದಾರಿಗಳ ಮೂಲಕ ಮಾತ್ರ ಸಾಧ್ಯ, ಆದರೆ ಇವುಗಳು ಪ್ರಾಕೃತಿಕವಾದುದಲ್ಲ, ಇಲ್ಲಿ ಸಾಮಾಜಿಕ ನ್ಯಾಯವಿರುವುದಿಲ್ಲ ಹಾಗು ಜೀವನದಲ್ಲಿ ಅವಕಾಶಗಳಿರುವುದಿಲ್ಲ ಹಲವಾರು ಅನಿವಾರ್ಯತೆಗಳ ನಡುವೆ ಬದುಕಬೇಕಾಗುತ್ತದೆ.

ಸಮಾಜದ ಪ್ರಗತಿಗಾಗಿ ಯಾವಾಗ ಸಾಮಾಜಿಕ ಬದಲಾವಣೆ ಪ್ರಾರಂಭವಾಗಬೇಕು ಮತ್ತು ಯಾವ ರೀತಿಯ ಬದಲಾವಣೆ ಬೇಕು ಎಂಬ ವಿಶ್ಲೇಷಣೆ ಮಾಡಬೇಕಾದರೆ ಶಿಕ್ಷಣ ಅಗತ್ಯ. ಒಳ್ಳೆಯ ಬದಲಾವಣೆ ಬೇಕೆಂದು ಸುಲಭವಾಗಿ ಹೇಳುತ್ತೇವೆ, ಆದರೆ ಒಳ್ಳೆಯದೆಂದರೆ ಏನು ಎಂಬುದನ್ನು ತಿಳಿಸುವುದೇ ಶಿಕ್ಷಣ.  

ಶಿಕ್ಷಣದ ಮೂಲಕ ಪ್ರತಿಯೊಬ್ಬ ಮನುಷ್ಯನು ತನ್ನ ಸುತ್ತಮುತ್ತಲಿನ ಪರಿಸರವನ್ನು ಧನಾತ್ಮಕವಾಗಿ ನೋಡುವ ದೃಷ್ಟಿಕೋನವನ್ನುಹೊಂದಿದಾಗ ಮಾತ್ರ ಶಾಂತಿಯುತ  ಸಮಾಜದ ಬೆಳವಣಿಗೆ, ಪ್ರಜಾಪ್ರಭುತ್ವದ ಬೆಳವಣಿಗೆ & ಸಾಮಾಜಿಕ ಬದಲಾವಣೆ ಸಾದ್ಯವಾಗುತ್ತದೆ.  

ಇದಕ್ಕಾಗಿ ಶಿಕ್ಷಣ ಬೇಕು ಹಾಗು ಶಿಕ್ಷಣವೂ ಅತ್ಯವಶ್ಯಕ ಸೇವೆಯಾಗಬೇಕು.


: ಕನ್ನಡವೆಂಕಿ, ರಾಮನಗರ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಂಡಿತ್‌ ನೆಹರು ಪ್ರೌಢಶಾಲೆ ಗುರುವಂದನಾ ಕಾರ್ಯಕ್ರಮದ ನೆನಪು

ನನ್ನವಳು ನನ್ನೊಲವಿನ ಬೆಳಕಿವಳು..!

ವಿದ್ಯಾಗಮ‌ ಕಾರ್ಯಕ್ರಮ ಸ್ಥಗಿತದ ಹಿಂದಿನ ಕಾರಣಗಳು