ಹೋರಾಟವಿದು ಹೊಟ್ಟೆಗಾಗಿ


ಹೋರಾಟವಿದು ಹೊಟ್ಟೆಗಾಗಿ


ಏನೆಲ್ಲಾ ಮಾಡಬೇಕಿದೆ ಈ ಹೊಟ್ಟೆಗಾಗಿ
ನಿರಂತರ ಹೋರಾಟವಿದು ತುಂಡು ರೊಟ್ಟಿಗಾಗಿ
ಬಂದಾಗ ನಾವಿಲ್ಲಿ ಬರೀ ಕೈ
ಹೋಗು ವಾಗ ಮಣ್ಣಾಗೋದು ಬರೀ ಮೈ
ಬಂದು ಹೋಗುವ ನಡುವೆ ಬರೀ ಗೋಳಾಟ
ಗೊತ್ತು ಎಲ್ಲರಿಗೂ ಇದು ಶಾಶ್ವತವಲ್ಲದ ಆಟ

ಇಂದಿನ ಹೋರಾಟ ನಮ್ಮ ನಾಳೆಗಾಗಿ
ಬೇರೊಬ್ಬರ ತು ಳಿಯು ತ್ತೇವೆ ನಮ್ಮ ಬಾಳ್ವೆಗಾಗಿ
ತಿಂದಿದ್ದ ಕರಗಿಸಲು ಉಳ್ಳವರ ಹೋರಾಟ
ತು ತ್ತು ಕೂ ಳಿಗಾಗಿ ಬಡವರ ಚೀರಾಟ
ಹಂಚಿತಿನ್ನುವುದ ಮರೆತದ್ದೆ ನಮ್ಮ ಧೌರ್ಭಾಗ್ಯ
ಕೂಳ ಕಂಡೊಡೆ ಬಳಗವ ಕರೆವ ಕಾಗೆಯದೆಂಥ ಸೌಭಾಗ್ಯ

ಬೇಡುವವನೊಬ್ಬ ಮಂದಿರದೊಳಗೆ
ಉಳಿಸು ದೇವರೇ ನನ್ನ ಐಶ್ವರ್ಯ ಆರೋಗ್ಯ
ಬೇಡುವವನೊಬ್ಬ ಅದೇ ಮಂದಿರದೊರಗೆ
ನೀಡು ದೇವರೇ ನನಗೆ ಐಶ್ವರ್ಯ ಆರೋಗ್ಯ
ಇದ್ದವನು ಇಲ್ಲದವನು ಇಬ್ಬರೂ ಬಿಕ್ಷುಕರೇ
ಬಾಳಿನ ಬುಗುರಿಯನಾಡಿಸುವ ಆ ದೇವನ ಮುಂದೆ
                                                                                                              - ಕನ್ನಡವೆಂಕಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಂಡಿತ್‌ ನೆಹರು ಪ್ರೌಢಶಾಲೆ ಗುರುವಂದನಾ ಕಾರ್ಯಕ್ರಮದ ನೆನಪು

ನನ್ನವಳು ನನ್ನೊಲವಿನ ಬೆಳಕಿವಳು..!

ವಿದ್ಯಾಗಮ‌ ಕಾರ್ಯಕ್ರಮ ಸ್ಥಗಿತದ ಹಿಂದಿನ ಕಾರಣಗಳು