ಆತ್ಮೀಯರು ನೀವ್ಯಾರೋ ನಿಮಗೆ ನಾ ಯಾರೋ

ಇಷ್ಟು ವರ್ಷಗಳ ಅನುಭವದಲ್ಲಿ ಈ ವರ್ಷ ಅತಿ ಹೆಚ್ಚು ಶುಭಾಶಯಗಳ ಸುರಿಮಳೆಯನ್ನೇ ಸುರಿಸಿದ ನನ್ನೆಲ್ಲಾ ಆತ್ಮೀಯ ಸ್ನೇಹಿತ ಬಂಧುಗಳೇ, ನನ್ನೆಲ್ಲಾ ಗೆಲುವನ್ನು ಪ್ರೋತ್ಸಾಹಿಸಿ , ಸೋತಾಗ ನನ್ನ ತಿದ್ದಿ ತೀಡಿದ ಹಾಗು ಇಂದು ನಾಲ್ಕಾರು ಜನ ನನ್ನನ್ನು ಗುರುತಿಸುವಂತಾಗಲು ಕಾರಣೀಕರ್ತರಾದ ನಿಮಗೆ ಹಾಗು ತಮ್ಮೆಲ್ಲ ಶ್ರಮವನ್ನು ನನ್ನ ಯಶಸ್ಸಿಗೆ ಧಾರೆಯೆರೆದ ನನ್ನ ಅ ಪ್ಪ-ಅಮ್ಮ ,ಅಕ್ಕಂದಿರು,ತಂಗಿ ಮತ್ತು ನನ್ನ ಪುಟಾಣಿಗಳೆಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು

ಬರಿದಾದ ಬದುಕಲ್ಲಿ ಸೂರ್ಯ ಕಿರಣಗಳ
ಬೆಳಕಂಥ ಭರವಸೆಯ ಮೂಡಿ ಸಿದ್ದ್ಯಾರೋ
ಬರಡಾದ ಮನದಲ್ಲಿ ಚಿಗುರೆಲೆಯ ಚಿತ್ತಾರದ
ನಗುವಿನ ಚಿಲುಮೆ ಚಿಮ್ಮಿಸಿದವರಾರೋ
ಯಾರೋ ನೀವ್ಯಾರೋ ನಿಮಗೆ ನಾ ಯಾರೋ

ಬಿರುಕು ಬಿಟ್ಟ ಬಂಜರು ಭೂಮಿಯಲ್ಲಿ
ಕಾರಂಜಿ ನೀರ ಬುಗ್ಗೆಯಂಥ
ನೆಮ್ಮದಿಯ ನಗು ಮೂಡಿಸಿದವರಾರೋ
ನೀರು ಸುರಿದ ಒಲೆಯಂತ ಜೀವನದಲ್ಲಿ
ಉತ್ಸಾಹ ಕಿಚ್ಚನ್ನು ಹಚ್ಚಿದವರಾರೋ
ಯಾರೋ ನೀವ್ಯಾರೋ ನಿಮಗೆ ನಾ ಯಾರೋ

ಗುರಿಯಿಲ್ಲದೇ ಸಾಗುತ್ತಿದ್ದ ಮರುಳುಗಾಡಿನಂಥ
ಹೃದಯದಲ್ಲಿ ಮಲ್ಲಿಗೆಯ ಅರಳಿಸಿದವರಾರೋ
ಹೆತ್ತವಳ ಮಮತೆಯ ನೆನಪು ಮೂಡಿಸಿ
ಕದಡಿದ ಕೊಳವಾಗಿದ್ದ ಮನಕ್ಕೆ ಶಾಂತಿಯ ನೀಡಿದವರಾರೋ
ಯಾರೋ ನೀವ್ಯಾರೋ ನಿಮಗೆ ನಾ ಯಾರೋ

ಯಾರೋ ನೀವ್ಯಾರೋ ನಿಮಗೆ ನಾ ಯಾರೋ
ನನ್ನವರಲ್ಲ ನನ್ನ ಒಡನಾಡಿಗಳಲ್ಲ ಒಟಹುಟ್ಟಿದವರಲ್ಲ
ಬದುಕಿನ ಪಯಣದಲ್ಲಿ ಜೊತೆಯಾದವರು
ಕತ್ತಲೆಯ ದಾರಿಯಲಿ ದಿಕ್ಕು ತೋಚದೇ ನಿಂತಾಗ
ಭರವಸೆಯ ಬೆಳಕು ನೀಡಿದವರು ನೀವ್ಯಾರೋ
ಆತ್ಮೀಯರು ನೀವ್ಯಾರೋ ನಿಮಗೆ ನಾ ಯಾರೋ

                                                                                                                            ಕನ್ನಡ ವೆಂಕಿ 17.07.2015


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಂಡಿತ್‌ ನೆಹರು ಪ್ರೌಢಶಾಲೆ ಗುರುವಂದನಾ ಕಾರ್ಯಕ್ರಮದ ನೆನಪು

ನನ್ನವಳು ನನ್ನೊಲವಿನ ಬೆಳಕಿವಳು..!

ವಿದ್ಯಾಗಮ‌ ಕಾರ್ಯಕ್ರಮ ಸ್ಥಗಿತದ ಹಿಂದಿನ ಕಾರಣಗಳು